ನವದೆಹಲಿ (PTI): ಆರ್ಮಿ ಡೆಂಟಲ್ ಕೋರ್‌ನ (ಎಡಿಸಿ) ಎಲ್ಲ ನೇಮಕಾತಿಗಳಲ್ಲಿ ಇನ್ನು ಮುಂದೆ ಲಿಂಗ ತಾರತಮ್ಯ ಇಲ್ಲ. ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಮೀಸಲಾತಿ ನಿಗದಿಪಡಿಸುವುದನ್ನು ರದ್ದುಪಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಎಡಿಸಿ ನೇಮಕಾತಿಯಲ್ಲಿ ಮಹಿಳೆಯರಿಗೆ ಕೇವಲ ಶೇ 10ರಷ್ಟು ಹುದ್ದೆಗಳನ್ನು ಮೀಸಲಿಟ್ಟಿದ್ದಕ್ಕೆ ಸುಪ್ರೀಂಕೋರ್ಟ್ ಏ.11ರಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಮೇ 8ರಂದು ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಮಹಿಳೆ ಮತ್ತು ಪುರುಷರಿಗಿದ್ದ ಪ್ರತ್ಯೇಕ ಮೀಸಲಾತಿಯನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ. ಭವಿಷ್ಯದ ಎಲ್ಲ ನೇಮಕಾತಿಗಳು ಲಿಂಗ ತಟಸ್ಥವಾಗಿರಲಿವೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರಿಗೆ ತಿಳಿಸಿದ್ದರು.
ಆದೇಶವನ್ನು ಬುಧವಾರ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.