ಕಾಸರಗೋಡು: ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇರಳದ ಎಡರಂಗ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ತಿಳಿಸಿದ್ದಾರೆ.
ಅವರು ಪೆರ್ಲಡ್ಕ-ಬಾವಿಕೆರೆ ರಸ್ತೆಯ ಅರಮನಪಾಡಿಯಲ್ಲಿ ಪಯಸ್ವಿನಿ ಹೊಳೆಗೆ ಅಡ್ಡ ನಿರ್ಮಾಣಗೊಳ್ಳಲಿರುವ ಅರಮನಪಾಡ್ ಸೇತುವೆಯ ಕಾಮಗಾರಿಯ ಉದ್ಘಾಟಿನೆ ನೆರವೇರಿಸಿ ಮಾತನಾಡಿದರು.
ಕೇವಲ ಪಾದಚಾರಿ ಸೇತುವೆಯಾಗಿದ್ದ ಅರಮನಪಾಡಿ ಸೇತುವೆ ಪ್ರಸಕ್ತ ಘನ ವಾಹನ ಸೇರಿದಂತೆ ಹೆಚ್ಚಿನ ಸಂಖ್ಯೆಯ ವಾಹನಗಳ ಸಂಚಾರದ ರಸ್ತೆಯಾಗಿ ಬದಲಾಗಿದೆ. ಅರಮನಪಾಡ್ ಸೇತುವೆ ಕಾಮಗಾರಿಯನ್ನು ಶೀಘ್ರ ಮಾಡಿ ಮುಗಿಸುವ ನಿಟ್ಟಿನಲ್ಲಿ, ಸೇತುವೆ ನಿರ್ಮಾಣ ಕಾಮಗಾರಿಯನ್ನು ಸಚಿವರ ಕಚೇರಿಯಿಂದಲೇ ನೇರವಾಗಿ ನಿರೀಕ್ಷಿಸಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಪಿಡಬ್ಲ್ಯೂಡಿ ಬ್ರಿಡ್ಜಸ್ ಕಣ್ಣೂರಿನ ಕಾರ್ಯಪಾಲಕ ಎಂಜಿನಿಯರ್ ಕೆ.ಎಂ.ಹರೀಶ್ ವರದಿ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಸ್ ಪಾದೂರ್, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಮುಳಿಯಾರು ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ, ಬೇಡಡ್ಕ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ವಿ.ಶಫೀಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವಸಂತಕುಮಾರಿ, ಪಂಚಾಯಿತಿ ಸದಸ್ಯ ಕೆ. ಪ್ರಿಯಾ, ಮುಳಿಯಾರ್ ಪಂಚಾಯತ್ ಸದಸ್ಯ ರಮೇಶ ಮುದಲಪ್ಪಾರ, ರಾಜಕೀಯ ಪಕ್ಷದ ಮುಖಂಡರಾದ ಎಂ.ಅನಂತನ್, ಎಂ.ಮಾಧವನ್, ಕುಞÂಕೃಷ್ಣನ್ ಮಾಡಕಲ್ಲ್, ಮುಹಮ್ಮದ್‍ಕುಞÂ, ರಾಜನ್ ಮಾಸ್ಟರ್, ರಾಧಾಕೃಷ್ಣನ್ ಚಾಲಕಾಡ್, ಕೆ.ನಾರಾಯಣನ್ ಉಪಸ್ಥಿತರಿದ್ದರು. ಬ್ರಿಡ್ಜಸ್ ಉತ್ತರ ವಲಯ ಕೋಯಿಕ್ಕೋಡ್ ಅಧೀಕ್ಷಕ ಅಭಿಯಂತೆ ಪಿ.ಕೆ.ಮಿನಿ ಸ್ವಾಗತಿಸಿದರು. ಪಿಡಬ್ಲ್ಯೂಡಿ ಬ್ರಿಡ್ಜಸ್ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತ ಪಿ.ಎಂ.ಸುರೇಶ್ ಕುಮಾರ್ ವಂದಿಸಿದರು. ಒಟ್ಟು 156 ಮೀ ಉದ್ದ ಮತ್ತು 11ಮೀ. ಅಗಲದಲ್ಲಿ ಸೇತುವೆ ನಿರ್ಮಾಣಗೊಳ್ಳಲಿದೆ.