ಕಾಸರಗೋಡು: ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ವಾಣಿಯಂಪಾರೆ ಉಪಸಂಘದ ದಶಮಾನೋತ್ಸವ ಹಾಗು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಸಾಧಕರಿಗೆ ಸಮ್ಮಾನ, ಕಲಾ ಪ್ರತಿಭೆಗಳಿಗೆ ಪುರಸ್ಕಾರ, ಎಸ್‍ಎಸ್‍ಎಲ್‍ಸಿ, ಪ್ಲಸ್ ಟು ನಲ್ಲಿ ಅತ್ಯ„ಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ವಿತರಣೆ ಮೊದಲಾದ ಕಾರ್ಯಕ್ರಮ ಹಾಲೆಹೊಂಡ ಶ್ರೀ ಮಹಾಮಾಯೆ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ವಾಣಿಯಂಪಾರೆ ಉಪಸಂಘದ ಅಧ್ಯಕ್ಷ ಕೆ.ಸುಬ್ರಾಯ ರಾವ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯದರ್ಶಿ ಸತೀಶ್ ದೋಣಿಬಾಗಿಲು, ಅಣಂಗೂರು ಉಪಸಂಘದ ಅಧ್ಯಕ್ಷ ಕಮಲಾಕ್ಷ ಅಣಂಗೂರು, ಜಿಲ್ಲಾ ಸಂಘದ ಜತೆ ಕಾರ್ಯದರ್ಶಿ ಪ್ರಭಾಶಂಕರ ಬೇಲೆಗದ್ದೆ, ಪ್ರದೀಪ್ ಬೇಕಲ್ ಅತಿಥಿಗಳಾಗಿ ಭಾಗವಹಿಸಿದರು. ಗೌರವಾಧ್ಯಕ್ಷ ಉಪೇಂದ್ರ ಕಲ್ಲಿಂಗಾಲ್ ಘನ ಉಪಸ್ಥಿತರಿದ್ದರು. ವಾಣಿಯಂಪಾರೆ ಉಪಸಂಘದ ಉಪಾಧ್ಯಕ್ಷ ಭಾಸ್ಕರ ನಂಬ್ಯಾರಡ್ಕ, ಮಹಿಳಾ ಸಂಘದ ಅಧ್ಯಕ್ಷೆ ಉಷಾ ನವೀನ ಉಪಸ್ಥಿತರಿದ್ದರು.
ಕಾರ್ಯದರ್ಶಿ ಯೋಗೀಶ್ ಕುಮಾರ್ ಸ್ವಾಗತಿಸಿದರು. ಮಹಿಳಾ ಸಂಘದ ಸದಸ್ಯೆ ಜಯಶ್ರೀ ವಂದಿಸಿದರು. ಜತೆ ಕಾರ್ಯದರ್ಶಿ ಪೂರ್ಣಿಮ ಕುನ್ನುಪ್ಪಾರೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.