HEALTH TIPS

ಕರ್ನಾಟಕ ಚುನಾವಣೋತ್ತರ ಸಮೀಕ್ಷೆ: ಕಾಂಗ್ರೆಸ್‌ಗೆ ಹೆಚ್ಚು ಸೀಟ್, ಅತಂತ್ರ ವಿಧಾನಸಭೆ ಸುಳಿವು

                ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈಮಧ್ಯೆ ಬಹುತೇಕ ಮಂದಿ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಹಿಂದೆಯೇ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹೇಳಿದಂತೆ ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ.

               ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಸೀವೋಟರ್ ಚುನಾವಣೋತ್ತರ ಸಮೀಕ್ಷೆಯು ಲಭ್ಯವಾಗಿದ್ದು, ಕಾಂಗ್ರೆಸ್ಗೆ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಬಾರದಿರುವುದು ಕೊಂಚ ನಿರಾಸೆಯಾಗಿ ಪರಿಣಮಿಸಿದೆ. ಸಮೀಕ್ಷೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರರು ಸಿ ವೋಟರ್ (C-Voter) 83-95 100-112 21-29 02-06 ರಿಪಬ್ಲಿಕ್ (Republic) 85-100 94-108 24-32 02-06 ಜೀ ನ್ಯೂಸ್ (Zee News) 79-94 103-118 25-33 02-05 ನ್ಯೂಸ್ ನೇಷನ್ಸ್-ಸಿಜಿಎಸ್ 114 86 21 03 ಪೋಲ್ ಸ್ಟಾರ್ಟ್ 88-98 99-109 21-26 02-04 ನವಭಾರತ್ (Navbharath) 78-92 106-120 20-26 02-04 ಟೈಮ್ಸ್ ನೌ (Times Now) 85 113 23 03 ಸುವರ್ಣ ನ್ಯೂಸ್- ಜನ್ ಕೀ ಬಾತ್ 94-117 91-106 14-24 2-6 Polls Of Polls 91 109 22 02 ಟುಡೇಸ್ ಚಾಣಕ್ಯ 92 120 12 03

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries