ಉಪ್ಪಳ: ಪೈವಳಿಕೆ ಪಂಚಾಯಿತಿಯ ಕುಡಾಲು ಮೇರ್ಕಳದ ಬಯಲು ಪ್ರದೇಶದಲ್ಲಿ ಬೃಹತ್ ಗಾತ್ರದ ಕಾಡುಕೋಣ ಕಾಣಿಸಿಕೊಂಡಿದ್ದು, ಊರ ಕೃಷಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸನಿಹದ ಹೊಳೆಯಲ್ಲಿ ಕಂಡುಬಂದ ಕಾಡುಕೋಣ ನಂತರ ಬಯಲು ಪ್ರದೇಶದಕ್ಕೆ ಪ್ರವೇಶಿಸಿದೆ. ಮಧ್ಯಾಹ್ನದ ವರೆಗೂ ಬಯಲಲ್ಲಿ ಸುತ್ತಾಡಿ ಮೇವು ತಿನ್ನುತ್ತಿದ್ದ ಕಾಡುಕೋಣ ನಂತರ ಕುರುಚಲು ಕಾಡಲ್ಲಿ ಮರೆಯಾಗಿದೆ. ಪಂಚಾಯಿತಿ ಸದಸ್ಯ ಅಶೋಕ್ ಭಂಡಾರಿ ಸೇರಿದಂತೆ ಊರವರು ಸ್ಥಳಕ್ಕಾಗಮಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯ ಚಕ್ಕಣಿಕೆ ಪ್ರದೇಶದಲ್ಲಿ ಕಾಡುಕೋಣ ಕಂಡುಬಂದಿದ್ದು, ಇಲ್ಲಿನ ನಿವಾಸಿ ಬಾಲಸುಬ್ರಹ್ಮಣ್ಯ ಭಟ್ ಅವರ ಅಂಗಳಕ್ಕೆ ಕಾಡುಕೋಣ ತಲುಪಿತ್ತು. ಇದಕ್ಕೂ ಎರಡು ದಿವಸಗಳ ಹಿಂದೆ ಇದು ಊಜಂಪದವು ಪ್ರದೇಶದಲ್ಲಿ ಕಂಡುಬಂದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು.
(ಸಾಂದರ್ಭಿಕ ಸಂಗ್ರಹ ಚಿತ್ರ)