ರಾಂಚಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಹರ್ಷಗೊಂಡಿರುವ ಜಾರ್ಖಾಂಡ್ ರಾಜ್ಯದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಶಾಸಕರೊಬ್ಬರು ದೇಶದಲ್ಲಿಯೇ ಅತಿದೊಡ್ಡ ಹನುಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕ ಇರ್ಫಾನ್ ಅನ್ಸಾರಿಯವರು ತಮ್ಮ ವಿಧಾನಸಭಾ ಕ್ಷೇತ್ರವಾದ ಜಮ್ತಾರಾದಲ್ಲಿ ದೇಶದ ಅತಿದೊಡ್ಡ ಹನುಮಾನ್ ಮಂದಿರವನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಕರ್ನಾಟಕಗಲ್ಲಿ ಪಕ್ಷವು ಬಹುಮತದಿಂದ ಗೆಲುವು ಸಾಧಿಸಿರುವುದು ಹನುಮಂತನ ಮೇಲಿನ ನನ್ನ ನಂಬಿಕೆ ಹೆಚ್ಚಾಗುವಂತೆ ಮಾಡಿದೆ. ಹನುಮಂತ ಎಲ್ಲರಿಗೂ ಸೇರಿದವನು. ಪಕ್ಷದ ಗೆಲುವು ಬಳಿಕ ಹನುಮಂತನ ದೇವಸ್ಥಾನಕ್ಕೆ ತೆರಳಿದೆ ಎಂದು ಅನ್ಸಾರಿಯವರು ಹೇಳಿದ್ದಾರೆ.
ಇದೇ ವೇಳೆ ದೇವಸ್ಥಾನ ನಿರ್ಮಾಣಕ್ಕೆ ಹಣ ಹೊಂದಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಕಿಡ್ನಿ ಮಾರಿಯಾದರೂ ದೇವಸ್ಥಾನ ನಿರ್ಮಾಣ ಮಾಡುತ್ತೇನೆಂದು ತಿಳಿಸಿದರು. ಈಗಾಗಲೇ ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಗುರ್ತಿಸಲಾಗಿದೆ. ಶೀಘ್ರದಲ್ಲಿಯೇ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು. ಬಳಿಕ ಬಜರಂಗಳ ನಿಷೇಧ ಕುರಿತ ಪ್ರಶ್ನೆಗೆ ಉತ್ತರಿಸಿ, ಹನುಮ ಹಾಗೂ ಆತನ ಭಕ್ತರ ಬಾಯಿಗೆ ಬೀಗ ಹಾಕುವ ಯತ್ನ ಇದಾಗಿದೆ ಎಂಬು ಬಿಜೆಪಿ ಎಲ್ಲಾ ಸಾರ್ವಜನಿಕ ಸಭೆಯಲ್ಲಿಯೂ ಹೇಳಿತ್ತು.
ಜೈ ಬಜರಂಗಬಲಿ ಎಂದು ಘೋಷಣೆ ಕೂಗಿತ್ತು. ನರೇಂದ್ರ ಮೋದಿಯವರು ‘ಜೈ ಬಜರಂಗಬಲಿ’ ಎಂದು ಕೂಗಿದ್ದರು. ಮೋದಿಯವರು ಹನುಮಂತನನ್ನು ಭಜರಂಗದಳದೊಂದಿಗೆ ಸಮೀಕರಿಸುವ ಮೂಲಕ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ, ಕೂಡಲೇ ಈ ಕುರಿತು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.