ಕಾಸರಗೋಡು: ಪ್ಲಸ್‍ಟು ಹಾಗೂ ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಲ್ಲಿರುವ ಆತಂಕ ನಿವಾರಿಸಲು ಮತ್ತು ಪರೀಕ್ಷೆಯ ಫಲಿತಾಂಶವನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಸಾಪ್ ಕಮ್ಯುನಿಟಿ ಸ್ಕಿಲ್ ಪಾರ್ಕ್ ಕಾಸರಗೋಡು ನಡೆಸುತ್ತಿರುವ ಒಂದು ದಿನದ ಕೌನ್ಸೆಲಿಂಗ್ ಕಾಸರಗೋಡಿನಲ್ಲಿ ನಡೆಯಲಿದೆ. ಮೇ 13ರಂದು ಬೆಳಿಗ್ಗೆ 11ಕ್ಕೆ ಕಾಸರಗೋಡು ಅಸಾಪ್ ಕಮ್ಯುನಿಟಿ ಸ್ಕಿಲ್ ಪಾರ್ಕ್‍ನಲ್ಲಿ ಕೌನ್ಸೆಲಿಂಗ್ ನಡೆಯಲಿದ್ದು, ಭಾಗವಹಿಸಲಿಚ್ಛಿಸುವವರು https://tinyurl.com/asapcspsadhairyam ವೆಬ್‍ಸೈಟ್ ಮೂಲಕ ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9495999641)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.