ಅಮೃತಸರ: ಇಲ್ಲಿನ ಸ್ವರ್ಣ ಮಂದಿರದ ಸಮೀಪ ಗುರುವಾರ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಇದು ಒಂದು ವಾರದಲ್ಲಿ ನಡೆದ ಮೂರನೇ ಸ್ಫೋಟವಾಗಿದೆ. ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದೆ.
ಅಮೃತಸರ: ಇಲ್ಲಿನ ಸ್ವರ್ಣ ಮಂದಿರದ ಸಮೀಪ ಗುರುವಾರ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಇದು ಒಂದು ವಾರದಲ್ಲಿ ನಡೆದ ಮೂರನೇ ಸ್ಫೋಟವಾಗಿದೆ. ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದೆ.
ಎರಡು ದಿನಗಳ ಹಿಂದಷ್ಟೇ ಸ್ವರ್ಣ ಮಂದಿರದ ಸಮೀಪ ಸಣ್ಣ ಪ್ರಮಾಣದ ಸ್ಫೋಟ ಸಂಭವಿಸಿತ್ತು.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೃತಸರ ಪೊಲೀಸ್ ಆಯುಕ್ತ ನೌನಿಹಾಲ್ ಸಿಂಗ್, 'ಮಧ್ಯರಾತ್ರಿ12.15ರ ವೇಳೆಗೆ ಭಾರೀ ಸದ್ದು ಕೇಳಿಸಿದ್ದರ ಬಗ್ಗೆ ಮಾಹಿತಿ ಲಭಿಸಿತ್ತು. ಇದು ಇನ್ನೊಂದು ಸ್ಫೋಟ ಎನ್ನುವ ಸಂಶಯ ಉಂಟಾಗಿದೆ. ಆದರೆ ಇದೊಂದು ಸ್ಫೋಟ ಎನ್ನುವುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದು ಹೇಳಿದ್ದಾರೆ.
ಸ್ವರ್ಣ ಮಂದಿರದ ಹೆರಿಟೇಜ್ ಸ್ಟ್ರೀಟ್ ಬಳಿ ಮೇ 6 ಹಾಗೂ 9 ರಂದು ಸಣ್ಣ ಪ್ರಮಾಣ ಸ್ಫೋಟದ ಸದ್ದು ಕೇಳಿ ಬಂದಿತ್ತು. ಈ ಎರಡು ಸ್ಫೋಟಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ ಹಾಗೂ ರಾಷ್ಟ್ರೀಯ ಭದ್ರತಾ ಗಾರ್ಡ್ ತನಿಖೆ ನಡೆಸುತ್ತಿದೆ.