ತುಂಬಾ ಕೋಪ ಬಂದಾಗ ನೀವು ಕೆಲವೊಂದು ಆಹಾರಗಳನ್ನು ತಿಂದರೆ ನಿಮ್ಮ ಕೋಪ ಮತ್ತಷ್ಟು ಹೆಚ್ಚಾಗುವುದು. ಕೋಪ ಯಾರಿಗೆ ತಾನೆ ಬರಲ್ಲ, ಕೆಲವೊಂದು ಕಾರಣಕ್ಕೆ ತುಂಬಾನೇ ಕೋಪ ಬರುತ್ತದೆ, ಹೀಗೆ ಕೋಪ ಬಂದಾಗ ನೀವು ಕೋಪ ಹೆಚ್ಚಿಸುವ ಆಹಾರವನ್ನು ತಿಂದರೆ ನಿಮ್ಮ ಕೋಪ ತಣಿಯುವುದೇ ಇಲ್ಲ. ಯಾವ ಆಹಾರಗಳು ಕೋಪವನ್ನು ಹೆಚ್ಚಿಸುತ್ತದೆ ಎಂದು ನೋಡೋಣ ಬನ್ನಿ:
ಟೊಮೆಟೊನೀವು ತುಂಬಾ ಕೋಪದಲ್ಲಿದ್ದಾಗ ಟೊಮೆಟೊ ಸೂಪ್, ಟೊಮೆಟೊ ಗೊಜ್ಜು ಅಂತ ತಿನ್ನಬೇಡಿ. ಟೊಮೆಟೊಗೆ ತೆಂಗಿನಕಾಯಿ, ಕೊತ್ತಂಬರಿ ಹಾಕಿ ಮಾಡಿದರೆ ಸೇವಿಸಬಹುದು.
ಬದನೆಕಾಯಿ: ಬದನೆಕಾಯಿ ಕೂಡ ಕೋಪ ಹೆಚ್ಚಿಸುವ ಗುಣವನ್ನು ಹೊಂದಿದೆ. ಅಲ್ಲದೆ ಮಸಾಲೆ ಪದಾರ್ಥಗಳು, ಕಾಫಿ ಮುಂತಾದ ಅಸಿಡಿಟಿ ಹೆಚ್ಚಿಸುವ ಆಹಾರಗಳು ದೇಹದ ಉಷ್ಣಾಂಶ ಹೆಚ್ಚಿಸುವುದು.
ಖಾರ ಪದಾರ್ಥಗಳು
ಖಾರ ಪದಾರ್ಥಗಳು ಕೋಪವನ್ನು ಹೆಚ್ಚಿಸುತ್ತದೆ. ಮಸಾಲೆ ಪದಾರ್ಥಗಳು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಈ ಬಗೆಯ ಆಹಾರಗಳನ್ನು ಸೇವಿಸಬಹುದು.
ಟ್ರಾನ್ಸ್ ಫ್ಯಾಟ್
ಟ್ರಾನ್ಸ್ ಫ್ಯಾಟ್ ಅಧಿಕ ಸೇವಿಸಿದಷ್ಟೂ ಕೋಪ ಹೆಚ್ಚಾಗುವುದು. ಒಮೆಗಾ 3 ಕೊಬ್ಬಿನಂಶ ದೇಹಕ್ಕೆ ತುಂಬಾನೇ ಒಳ್ಳೆಯದು, ಆದರೆ ಟ್ರಾನ್ಸ್ ಫ್ಯಾಟ್ ದೇಹಕ್ಕೆ ಒಳ್ಳೆಯದಲ್ಲ. ಕರಿದ ಪದಾರ್ಥಗಳನ್ನು ತಿನ್ನುವುದು ಕಡಿಮೆ ಮಾಡಿ.
ಕೆಫೀನ್ ಅಂಶವಿರುವ ಆಹಾರ
ತುಂಬಾ ಟೀ, ಕಾಫಿ ಕುಡಿಯುವುದರಿಂದ ಬೇಗನೆ ಕೋಪ ಬರುವುದು. ದಿನದಲ್ಲಿ ಎರಡು ಲೋಟ ಟೀ ಅಥವಾ ಕಾಫಿ ಕುಡಿಯಬಹುದು. ತುಂಬಾ ಟೀ, ಕಾಫಿ ಕುಡಿಯುವವರು ಟೀ ಅಥವಾ ಕಾಫಿ ಸಿಗದಿದ್ದರೆ ತುಂಬಾನೇ ಕೋಪಗೊಳ್ಳುತ್ತಾರೆ. ಅತ್ಯಧಿಕ ಕೆಫೀನ್ ಅಂಶ ಕೋಪವನ್ನು ಹೆಚ್ಚಿಸುತ್ತದೆ.
ಸಂಸ್ಕರಿಸಿದ ಆಹಾರ
ಕುಕ್ಕೀಸ್, ಚಿಪ್ಸ್, ಪಾಸ್ತಾ ಈ ಬಗೆಯ ಆಹಾರಗಳು ತಿನ್ನುವಾಗ ಖುಷಿಯಾಗುವುದು. ಆದರೆ ಈ ಬಗೆಯ ಆಹಾರಗಳು ತಿನ್ನುವಾಗ ಮಾತ್ರ ಖುಷಿ ನೀಡುತ್ತದೆ, ಆದರೆ ಮೂಡ್ ಸ್ವಿಂಗ್ ಉಂಟಾಗುವುದು, ಇದರಿಂದ ಕೋಪ ಹೆಚ್ಚಾಗುವುದು.
ಚ್ಯುಯಿಂಗ್ ಗಮ್ ಮತ್ತು ಕ್ಯಾಂಡಿ
ಚ್ಯುಯಿಂಗ್ ಗಮ್, ಕ್ಯಾಂಡಿ ಇವುಗಳಲ್ಲಿ ಕೃತಕ ಸಿಹಿ ಇರುತ್ತದೆ, ಈ ಬಗೆಯ ಆಹಾರಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾಗುವುದು, ಅಲ್ಲದೆ ಕಿರಿಕಿರಿ ಅನಿಸುವುದು, ಬೇಗನೆ ಕೋಪ ಬರುವುದು.
ಫ್ರಿಡ್ಜ್‌ನಲ್ಲಿಟ್ಟ ಹಣ್ಣುಗಳು ಹಾಗೂ ಹಣ್ಣಿನ ಜ್ಯೂಸ್, ಸಲಾಡ್
ಫ್ರಿಡ್ಜ್‌ನಲ್ಲಿಟ್ಟ ಹಣ್ಣು, ಹಣ್ಣಿನ ಜ್ಯೂಸ್, ಸಲಾಡ್ ಇವುಗಳನ್ನು ತಿನ್ನುವಾಗ ತಂಪಾಗಿ ತುಂಬಾ ಹಿತ ಅನಿಸುವುದು, ಆದರೆ ಈ ಬಗೆಯ ಆಹಾರಗಳು ಕೋಪವನ್ನು ಹೆಚ್ಚಿಸುತ್ತದೆ.
ಯಾವ ಬಗೆಯ ಆಹಾರಗಳು ಕೋಪವನ್ನು ಕಡಿಮೆ ಮಾಡುತ್ತದೆ?
* ತಾಜಾ ಹಣ್ಣುಗಳನ್ನು ಸೇವಿಸಿ, ಕಿತ್ತಳೆ ಹಣ್ಣು ತುಂಬಾ ಒಳ್ಳೆಯದು
* ಮೀನು, ಮೊಟ್ಟೆ, ಸೊಪ್ಪು
* ಒಮೆಗಾ 3 ಕೊಬ್ಬಿನಂಶವಿರುವ ಆಹಾರ ನಿಮ್ಮ ಕೋಪ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ.
* ಬಾದಾಮಿ, ಪಾಲಾಕ್, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ ಈ ಬಗೆಯ ಆಹಾರಗಳು ಕೋಪ ನಿಯಂತ್ರಿಸಲು ತುಂಬಾನೇ ಸಹಕಾರಿ.
* ಕೃತಕ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ
* ವಿಟಮಿನ್ ಡಿ ಅವಶ್ಯಕ. ವಿಟಮಿನ್ ಡಿ ನಿಮಗೆ ಸೂರ್ಯನ ಬೆಳಕಿನಿಂದ ದೊರೆಯುತ್ತದೆ. ಬೆಳಗ್ಗೆ 9 ಗಂಟೆಯ ಒಗೆ ಒಂದು 10 ಬಿಸಿಲಿನಲ್ಲಿ ನಿಲ್ಲಿ.
ಕೋಪ: ಕೋಪ ಎಲ್ಲರಿಗೂ ಬರುತ್ತದೆ, ಆದರೆ ಕೆಲವರಿಗೆ ಮಿತಿಮೀರಿ ಬರುತ್ತದೆ, ಮಿತಿ ಮೀರಿದ ಕೋಪ ಯಾವಾಗಲೂ ದೊಡ್ಡ ಅನಾಹುತ ಉಂಟು ಮಾಡುತ್ತದೆ. ಆದ್ದರಿಂದ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು. ನಿಮಗೆ ತುಂಬಾ ಮುಂಗೋಪ ಇದ್ದರೆ ಕೋಪ ಹೆಚ್ಚಿಸುವ ಆಹಾರಗಳನ್ನು ಕಡಿಮೆ ಮಾಡಿ, ಕೋಪ ನಿಯಂತ್ರಿಸುವ ಆಹಾರಕ್ರಮ ಕಡೆಗೆ ಗಮನಹರಿಸಿ.
ಧ್ಯಾನ ಮಾಡಿ
ಪ್ರತಿದಿನ 15 ನಿಮಿಷ ಧ್ಯಾನ ಮಾಡಿ, ಧ್ಯಾನ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ ಅಲ್ಲದೆ ನಿಮ್ಮ ಕೋಪ, ಮುಂಗೋಪ ನಿಯಂತ್ರಿಸುತ್ತದೆ.