ಕುಂಬಳೆ/ ದುಬೈ: ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿದ್ದಕ್ಕೆ ದುಬೈ ಕೆಎಂಸಿಸಿ ಮಂಜೇಶ್ವರ ಕ್ಷೇತ್ರ ಸಮಿತಿಯು ಕೇಕ್ ಕತ್ತರಿಸಿ ಸಂತಸ ವ್ಯಕ್ತಪಡಿಸಿತು.
ದುಬೈ ಕೆಎಂಸಿಸಿ ಕಛೇರಿಯಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ದುಬೈ ಕೆಎಂಸಿಸಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಉದ್ಘಾಟಿಸಿದರು. ದುಬೈ ಕೆಎಂಸಿಸಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಪಾವೂರ್, ಮಂಡಲ ಸಮಿತಿ ಪದಾಧಿಕಾರಿಗಳಾದ ಇಬ್ರಾಹಿಂ ಬೇರಿಕೆ, ಝುಬೈರ್ ಕುಬಣೂರು, ಮನ್ಸೂರ್ ಮತ್ರ್ಯ, ಸಲಾಂ ಪಟ್ಲಡ್ಕ, ಅಶ್ರಫ್ ಬಾಯಾರ್, ಯೂಸುಫ್ ಶೇಣಿ, ಆಸಿಫ್ ಹೊಸಂಗಡಿ, ಅಮಾನ್ ತಲೇಕಳ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿ. ನೂತನ ಸÀರ್ಕಾರಕ್ಕೆ ಉತ್ತಮ ಆಡಳಿತ ನಡೆಸಲು ಸಾಧಿಸಲಿ ಎಂದು ಶುಭ ಹಾರೈಸಿದರು.