ಇನ್ನೇನು ಓದಿ ಮುಗಿತೂ ಅನ್ನೋವಾಗ ಕೆಲಸ ಹುಡುಕೋ ಗೋಳು. ಪ್ರತಿನಿತ್ಯ ಹತ್ತಾರು ಕಂಪನಿಗಳಿಗೆ ನಮ್ಮ ರೆಸ್ಯೂಮ್ ಕಳಿಸುತ್ತಾ ಅಲ್ಲಿಂದ ಯಾವಾಗ ಕಾಲ್ ಬರುತ್ತೋ ಅಂತ ಚಾತಕ ಪಕ್ಷಿಯಂತೆ ಕಾಯ್ತಿರ್ತೀವಿ. ಕೆಲವೊಂದು ಸಲ ಅಂತೂ ಕಾಲ್ ಬರೋದೇ ಇಲ್ಲ. ಇನ್ನೂ ಕೆಲವು ಸಲ ಕಾಲ್ ಬಂದ್ರೂ ಕೂಡ ನಮ್ಮ ಓದಿಗೆ ತಕ್ಕುದಾದ ಕೆಲಸ ಸಿಗೋದಿಲ್ಲ. ಇನ್ನೂ ಕೆಲವೊಂದು ಕೆಲಸಗಳಲ್ಲಿ ಸಂಭಳ ಕಡಿಮೆ ಇರುತ್ತೆ. ಹೀಗೆ ಕೆಲಸ ಹುಡುಕೋವಾಗ ನೂರಾರು ಅಡ್ಡಿ, ಆತಂಕಗಳು ಎದುರಾಗುತ್ವೆ. ಆದ್ರೆ ನೀವು ಕೆಲಸ ಹುಡುಕೋವಾಗ ಈ ಟಿಪ್ಸ್ ಫಾಲೋ ಮಾಡಿದ್ರೆ ಖಂಡಿತ ನಿಮಗೆ ಕೆಲಸ ಸಿಕ್ಕೇ ಸಿಗುತ್ತದೆ.
1. ನಿಮ್ಮ ರೆಸ್ಯೂಮ್ ಅಪ್ಡೇಟ್ ಮಾಡಿ
ನೀವು ಹಳೆಯ ರೆಸ್ಯೂಮ್ ಅನ್ನು ಇಟ್ಕೊಂಡು ಅರ್ಜಿ ಸಲ್ಲಿಸಿದ್ರೆ ಖಂಡಿತ ನಿಮಗೆ ಒಂದು ಕಾಲ್ ಕೂಡ ಬರೋದಿಲ್ಲ. ಒಂದು ವೇಳೆ ನೀವು ಹೊಸ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಹೊಸದಾಗಿ ಒಂದ ರೆಸ್ಯೂಮ್ ತಯಾರು ಮಾಡಿ. ಅದ್ರಲ್ಲಿ ನಿಮ್ಮ ಅನುಭವ, ಕೌಶಲ್ಯ ಮತ್ತು ಅರ್ಹತೆಗಳನ್ನು ಸೇರಿಸಿ. ಇನ್ನೂ ಆ ಸ್ಥಾನಕ್ಕಾಗಿ ಏನು ಕೌಶಲ್ಯಬೇಕೋ ಆ ಕೌಶಲ್ಯಗಳನ್ನು ನಿಮ್ಮ ರೆಸ್ಯೂಮ್ ನಲ್ಲಿ ಉಲ್ಲೇಖ ಮಾಡಿ. ಇನ್ನೂ ರೆಸ್ಯೂಮ್ನಲ್ಲಿ ಒಂದೂ ಅಕ್ಷರಗಳು ತಪ್ಪಿರದಂತೆ ಗಮನ ಹರಿಸಿ. ರೆಸ್ಯೂಮ್ ಯಾವಾಗಲೂ ಚಿಕ್ಕದಾಗಿ ಚೊಕ್ಕವಾಗಿರಬೇಕು.
2. ಸರಿಯಾದ ಸ್ಥಳದಲ್ಲೇ ಕೆಲಸ ಹುಡುಕಿ
ನಮಗೆ ಏನು ಬೇಕೋ ಅದನ್ನು ಸರಿಯಾದ ಸ್ಥಳದಲ್ಲಿ ಹುಡುಕಿದರಷ್ಟೇ ಅದು ನಮಗೆ ಸಿಗುತ್ತದೆ. ಅದೇ ರೀತಿ ನೀವು ಹಿಂದಿನ ಕೆಲ ವರ್ಷಗಳಂತೆ ಕಂಪನಿಯಿಂದ ಕಂಪನಿಗೆ ಅಲೆದಾಡಿದರೆ ಕೆಲಸ ಸಿಗೋದಿಲ್ಲ. ಬದಲಾಗಿ ಆನ್ಲೈನ್ ಸೈಟ್ಗಳಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ. ಅಲ್ಲಿ ನಿಮ್ಮ ಪದವಿ, ಅನುಭವಕ್ಕೆ ಸರಿಹೊಂದುವ ಸಾವಿರಾರು ಕೆಲಸಗಳಿರುತ್ತದೆ. ಇನ್ನೂ ನಿಮ್ಮ ಸ್ನೇಹಿತರ ಹಾಗೂ ಆಪ್ತರ ಕಂಪನಿಗಳಲ್ಲಿ ನಿಮಗೆ ಸರಿ ಹೊಂದುವ ಕೆಲಸವಿದ್ದರೆ ರೆಫರ್ ಮಾಡೋದಕ್ಕೆ ತಿಳಿಸಿ.
3. ಕೆಲಸಕ್ಕೆ ತಕ್ಕ ಕೌಶಲ್ಯಗಳು ನಿಮ್ಮಲ್ಲಿರಲಿ
ನಿಮಗೆ ಆಸಕ್ತಿಯಿರುವ ಕೆಲಸವನ್ನು ಹುಡುಕುತ್ತಿರುವಾಗ ನಿಮ್ಮ ಕೌಶಲ್ಯಗಳು, ಅನುಭವ ಮತ್ತು ಸಂಬಳದ ನಿರೀಕ್ಷೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ. ನಿಮ್ಮ ಅಸ್ತಿತ್ವದಲ್ಲಿರುವ ಅನುಭವದೊಂದಿಗೆ ಸರಿಯಾಗಿ ಹೊಂದಿಕೆಯಾಗದ ಅವಕಾಶಗಳಿಗಾಗಿ ನೀವು ಅರ್ಜಿ ಸಲ್ಲಿಸಿ. ಒಂದು ವೇಳೆ ನಿಮ್ಮ ಅರ್ಹತೆಗೂ ಮೀರಿದ ಸಂಭಳ ಬೇಕೆಂದು ನೀವು ಬಯಸಿದರೆ ಅದು ಖಂಡಿತ ಸಾಧ್ಯವಿಲ್ಲ. ಹಾಗೂ ಕೂಡ ನೀವು ನಿಮ್ಮ ಛಲ ಬಿಡದೇ ಹೆಚ್ಚಿನ ಸಂಭಳ ಬೇಕೇ ಬೇಕು ಎಂದು ಕೊಂಡರೆ ಮೊದಲು ಆ ಕೆಲಸಕ್ಕೆ ಅಗತ್ಯವಿರುವ ಕೋರ್ಸ್ ಮಾಡಿ ಹಾಗೂ ಕೌಶಲ್ಯ ಬೆಳೆಸಿಕೊಳ್ಳಿ.
4. ಸ್ಪರ್ಧೆಯ ಬಗ್ಗೆ ಗಮನ ಕೊಡಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಪದವಿ ಮುಗಿಸಿರುತ್ತಾರೆ. ಒಂದು ಕೆಲಸಕ್ಕಾಗಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿರುತ್ತಾರೆ. ಸ್ಪರ್ಧೆ ಹೆಚ್ಚಾಗಿರುತ್ತದೆ. ಹೀಗಾಗಿ ನೀವು ಸ್ಪರ್ಧೆಯ ಬಗ್ಗೆ ಅರಿತುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಆ ಒಂದು ಲಕ್ಷ ಜನರನ್ನು ಹಿಂದಕ್ಕೆ ತಳ್ಳಿ ಆ ಕೆಲಸವನ್ನೂ ನೀವೇ ತೆಗೆದುಕೊಳ್ಳುವಷ್ಟು ಸಾಮರ್ಥ್ಯ ನಿಮ್ಮಲ್ಲಿರಬೇಕು. ಹೀಗಾಗಿ ಸ್ಪರ್ಧಾ ಸಾಮರ್ಥ್ಯ ನಿಮ್ಮಲ್ಲಿರೋದು ತುಂಬಾನೇ ಮುಖ್ಯವಾಗುತ್ತದೆ.
5. ಟಾರ್ಗೆಟ್ ಇಟ್ಟುಕೊಳ್ಳಬೇಡಿ
ನೀವು ಕೆಲಸ ಹುಡುಕೋದಕ್ಕೆ ಶುರು ಮಾಡಿದಾಗ ಇಷ್ಟು ದಿನದೊಳಗೆ ಕೆಲಸ ಸಿಗಲೇಬೇಕು ಎನ್ನುವ ಟಾರ್ಗೆಟ್ ಇಟ್ಟುಕೊಳ್ಳಬೇಡಿ. ಆಗ ನಿಮ್ಮಲ್ಲಿ ಒತ್ತಡ ಹೆಚ್ಚಾಗುತ್ತದೆ. ಕೆಲಸ ಸಿಗದಿದ್ದಾಗ ನಿಮಗೆ ನಿರಾಶೆಯಾಗಬಹುದು. ಮತ್ತೆ ಕೆಲಸ ಹುಡುಕುವ ಆ ಛಲ ನಿಮ್ಮಲ್ಲಿ ಇರದೇ ಇರಬಹುದು. ಹೀಗಾಗಿ ಆರಾಮಾಗಿ ಕೆಲಸ ಹುಡುಕಿ ಇದಲ್ಲದಿದ್ದರೆ ಇನ್ನೊಂದು ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಅಲೋಚನೆ ತಲೆಯಲ್ಲಿದ್ದರೆ ಸಾಕು. ಒತ್ತಡ ಹೇರಲು ಹೋಗಬೇಡಿ.
ಅನೇಕ ಜನರು ತಮ್ಮದೇ ಆದ ಸ್ವಂತ ವ್ಯಾಪಾರ ಶುರು ಮಾಡುತ್ತಾರೆ. ಅದ್ರಲ್ಲಿ ಹೆಚ್ಚಿನವರು ಈ ರೀತಿ ಕೆಲಸ ಹುಡುಕುತ್ತಾ ತಮ್ಮ ಹೊಟ್ಟೆಗೊಂದು ದಾರಿ ಕಂಡುಕೊಳ್ಳುತ್ತಾರೆ. ಕೆಲಸ ಹುಡುಕುವಾಗ ಅವಸರ ಮಾಡಬಾರದು. ತಾಳ್ಮೆಯಿಂದ ಹುಡುಕಿದರೆ, ನಿಮ್ಮಲ್ಲಿ ಆ ಸಾಮರ್ಥ್ಯ ಇದ್ದರೆ ಖಂಡಿತ ಕೆಲಸ ಸಿಕ್ಕೇ ಸಿಗುತ್ತದೆ.