ತಿರುವನಂತಪುರಂ: ಕೇರಳ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಮಹಿಳೆಯೊಬ್ಬರ ಮುಂದೆ ಕಾಮುಕನೊಬ್ಬ ಹಸ್ತಮೈಥುನ ಮಾಡುವ ಮೂಲಕ ತೀರಾ ಅಸಹ್ಯವಾಗಿ ವರ್ತಿಸಿದ ಘಟನೆ ಕೇರಳದ ಕಣ್ಣೂರು ಜಿಲ್ಲೆ ಪಯ್ಯನೂರು ಬಳಿಯ ಚೆರುಪುಳದಲ್ಲಿ ನಡೆದಿದೆ.
ಮಹಿಳೆ ಘಟನೆಯ ವಿಡಿಯೋವನ್ನು ಚಿತ್ರೀಕರಿಸಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮತ್ತು ವ್ಯಕ್ತಿಯೂ ಹಸ್ತಮೈಥುನ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತದೆ.
ದೂರು ದಾಖಲಾಗಿಲ್ಲ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು ಈ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ನಾವು ಸೂರು ದಾಖಲಿಸಿಕೊಳ್ಳಲು ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ರೀತಿಯ ಘಟನೆಯೂ ಎರ್ನಾಕುಲಂನಲ್ಲಿ ನಡೆದಿತ್ತು. ಪಕ್ಕದ ಸೀಟಲ್ಲಿ ಕುಳಿತಿದ್ದ ಯುವತಿಗೆ ಪ್ರಯಾಣಿಕ ಗುಪ್ತಾಂಗ ಪ್ರದರ್ಶಿಸಿದ್ದ. ಬಳಿಕ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.