HEALTH TIPS

ನಿಮ್ಮೊಂದಿಗೆ ಸದಾ ನಾವಿರುವೆವು: ಪೆಸಿಫಿಕ್‌ ದ್ವೀಪ ರಾಷ್ಟ್ರಗಳ ನಾಯಕರಿಗೆ ಮೋದಿ ಅಭಯ

               ಪೋರ್ಟ್‌ ಮೊರೆಸ್ಬಿ: 'ನಿಮಗೆ ನಾವು ಎಲ್ಲಾ ರೀತಿಯಿಂದಲೂ ಸಹಾಯ ಹಸ್ತ ಚಾಚಲಿದ್ದೇವೆ. ನಿಮ್ಮೊಂದಿಗೆ ಸದಾ ಇರುತ್ತೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪೆಸಿಫಿಕ್‌ ದ್ವೀಪ ರಾಷ್ಟ್ರಗಳ 14 ಮಂದಿ ನಾಯಕರಿಗೆ ಅಭಯ ನೀಡಿದ್ದಾರೆ.

                ಇದೇ ಮೊದಲ ಬಾರಿಗೆ ಪಪುವಾ ನ್ಯೂ ಗಿನಿಗೆ ಭೇಟಿ ನೀಡಿರುವ ಅವರು ಭಾರತ-ಪೆಸಿಫಿಕ್‌ ದ್ವೀಪ ರಾಷ್ಟ್ರಗಳ ಸಹಕಾರ ವೇದಿಕೆಯ (ಎಫ್‌ಐಪಿಐಸಿ) ಸಮ್ಮೇಳನವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ್ದಾರೆ.

             ಪೆಸಿಫಿಕ್‌ ದ್ವೀಪ ರಾಷ್ಟ್ರಗಳ ಪಾಲಿಗೆ ಭಾರತವೇ ನಂಬಿಕಸ್ಥ ದೇಶ ಎಂಬುದನ್ನು ಆ ರಾಷ್ಟ್ರಗಳ ನಾಯಕರಿಗೆ ಮನವರಿಕೆ ಮಾಡಿಕೊಡಲೂ ಅವರು ಪ್ರಯತ್ನಿಸಿದ್ದಾರೆ.

               'ನಾವು ನಮ್ಮ ಸಾಮರ್ಥ್ಯ ಹಾಗೂ ಅನುಭವವನ್ನು ಯಾವುದೇ ಸಂಕೋಚವಿಲ್ಲದೆ ನಿಮ್ಮೊಂದಿಗೆ ಹಂಚಿಕೊಳ್ಳಲು ಸಿದ್ಧವಿದ್ದೇವೆ' ಎಂದೂ ಅವರು ಭರವಸೆ ನೀಡಿದ್ದಾರೆ.

                 ಕೋವಿಡ್‌ನಿಂದ ಎದುರಾಗಿದ್ದ ಸವಾಲುಗಳು ಹಾಗೂ ಇತರ ಜಾಗತಿಕ ಬೆಳವಣಿಗೆಗಳನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, 'ಸವಾಲಿನ ಸಂದರ್ಭಗಳಲ್ಲಿ ಭಾರತವು ಪೆಸಿಫಿಕ್‌ ದ್ವೀಪ ರಾಷ್ಟ್ರಗಳ ನೆರವಿಗೆ ನಿಂತಿದೆ. ಮಾನವೀಯ ನೆಲೆಯಲ್ಲಿ ನಮ್ಮಿಂದ ಯಾವುದೇ ಸಹಕಾರವನ್ನಾದರೂ ಪಡೆದುಕೊಳ್ಳಿ. ಇದಕ್ಕೆ ಸಂಕೋಚ ಬೇಡ. ನಾವು ನಿಮ್ಮ ಆದ್ಯತೆಯನ್ನು ಗೌರವಿಸುತ್ತೇವೆ' ಎಂದು ತಿಳಿಸಿದ್ದಾರೆ.

                'ನಾವು ಯಾರನ್ನು ನಂಬಿಕಸ್ಥರು ಎಂದು ಪರಿಗಣಿಸಿದ್ದೆವೊ ಅವರು ಕಷ್ಟಕಾಲದಲ್ಲಿ ನಮ್ಮ ನೆರವಿಗೆ ಧಾವಿಸಲಿಲ್ಲ. 'ಕಷ್ಟಕಾಲದಲ್ಲಿ ನೆರವಾಗುವವನೇ ನಿಜವಾದ ಸ್ನೇಹಿತ' ಎಂಬ ಮಾತು ಈ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ' ಎಂದು ಯಾವ ರಾಷ್ಟ್ರಗಳ ಹೆಸರನ್ನೂ ಪ್ರಸ್ತಾಪಿಸದೆಯೇ ದೂರಿದ್ದಾರೆ.

              'ಕಷ್ಟ ಕಾಲದಲ್ಲಿ ಲಸಿಕೆ, ಔಷಧ, ಗೋಧಿ ಅಥವಾ ಸಕ್ಕರೆ ಹೀಗೆ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಭಾರತವು ಪೆಸಿಫಿಕ್‌ ದ್ವೀಪದ ಮಿತ್ರ ರಾಷ್ಟ್ರಗಳ ಬೆನ್ನಿಗೆ ನಿಂತಿದೆ. ಇದು ಸಂತಸದ ವಿಚಾರ. ಭಾರತವು ಇಡಿ ಜಗತ್ತನ್ನೇ ಒಂದು ಕುಟುಂಬವೆಂದು ಪರಿಗಣಿಸುತ್ತದೆ. ನಿಮ್ಮನ್ನು ನಾವು ಸಣ್ಣ ದ್ವೀಪ ರಾಷ್ಟ್ರಗಳೆಂದು ಯಾವತ್ತೂ ಭಾವಿಸಿಲ್ಲ' ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries