ಕಾಸರಗೋಡು: ಕನ್ನಡದ ಸಂಸ್ಕøತಿ ಉಳಿಸಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಕಥಾಬಿಂದು ಪ್ರಕಾಶನ, ಪಾಂಗೋಡು ಶ್ರೀ ದುರ್ಗಾಪರಮೇಶ್ವರೀಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕøತಿಕ ಘಟಕ ಮತ್ತು ಕರ್ನಾಟಕ ಇತಿಹಾಸ ಅಕಡಮಿ ಕಾಸರಗೋಡು ಜಿಲ್ಲಾ ಘಟಕ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಕಾಸರಗೋಡು ಕನ್ನಡ ಭವನ ಕನ್ನಡ ಕನ್ನಡ ಸಂಸ್ಕøತಿ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕನ್ನಡಭವನ ಸ್ಥಾಪಕಾಧ್ಯಕ್ಷ ವಾಮನರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕವಿ, ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಅವರಿಗೆ ಗುರುನಮನ ಗೌರವಾರ್ಪಣೆ, ಬರಹಗಾರ ಶ್ರೀಕೃಷ್ಣಯ್ಯ ಅನಂತಪುರ, ಗುಣಾಜೆ ರಾಮಚಂದ್ರ ಭಟ್, ವೈ. ಸತ್ಯನಾರಾಯಣ, ಸ್ನೇಹಲತಾದಿವಾಕರ್, ಶ್ರೀಹರಿ ಭಟ್ ಪೆಲ್ತಾಜೆ, ಸುಂದರ ಬಾರಡ್ಕ, ಪತ್ರಕರ್ತ ರಾಜೇಶ್ ರೈ ಚಟ್ಲ, , ಪಿ.ವಿ ಪ್ರದೀಪ್ ಕುಮಾರ್ ಮಂಗಳೂರು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡ, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡಮಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೇಖಾ ಸುದೇಶ್ ರಾವ್, ಜೆಡ್.ಎ ಕಯ್ಯಾರ್ ಅವರನ್ನು ಸನ್ಮಾನಿಸಲಾಯಿತು. ಜಯಾನಂದ ಕುಮಾರ್ ಹೊಸದುರ್ಗ ಸಾಂಸ್ಕøತಿಕ ವೈಭವ ಉದ್ಘಾಟಿಸಿದರು.
ಪುಟ್ಟಪ್ಪ ಶಂಕ್ರಪ್ಪ ತಂಬೂರಿ ವಿಜಯನಗರ, ನಾಗರಾಜಪ್ಪ ಅದಾಪುರ ದಾವಣಗೆರೆ, ರೇಣುಕಾ ಹ.ಬಡಕಣ್ಣನವರ್ ಹಾವೇರಿ, ಕೃಷ್ಣಪ್ಪ ವಾಸದ್ದ ಸೊಪ್ಪಿನ ವಿಜಯನಗರ, ನಿಂಗಪ್ಪ ಅಡಿವೆಪ್ಪನವರ್ ಹಾವೇರಿ, ಪಕೀರೇಶ್ ಎಂ. ಕಟ್ಟಿಮನಿ ಹಾವೇರಿ, ಶಿವಪ್ರಸಾದ್ ಕೊಕ್ಕಡ ಮಂಗಳೂರು, ರಶ್ಮೀ ಸನಿಲ್ ಶಾಂತಾ ಪುತ್ತೂರು, ಜಯಾನಂದ ಪೆರಾಜೆ, ವಾಮನರಾವ್ ಬೇಕಲ್-ಸಂಧ್ಯಾರಾಣಿ ದಂಪತಿ, ವಸಂತ ಕೆರೆಮನೆ, ಆಶಾರಾಧಾಕೃಷ್ಣ ಅಣಂಗೂರು, ಉಷಾಕಿರಣ ಅಣಂಗೂರು ಅವರಿಗೆ ಕಥಾಬಿಂದು ಕನ್ನಡಶ್ರೀರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಯಿತು.ಈ ಸಂದರ್ಭ ಸಿವಾಯ್ ಮೆಣಸಿನಕಾಯಿ ಅವರ ಕನಸಿನ ತೋಟ(ಕವನ ಸಂಕಲನ)ಹಾಗೂ ಚಾರವಾಣಿ(ಕಥಾ ಸಂಕಲನ)ಬಿಡುಗಡೆಗೊಳಿಸಲಾಯಿತು.
ಎ.ಆರ್. ಸುಬ್ಬಯ್ಯಕಟ್ಟೆ, ರಾಧಾಕೃಷ್ಣ ಉಳಿಯತ್ತಡ್ಕ, ಪಿ.ವಿ ಪ್ರವೀಣ್ ಕುಮಾರ್, ವಿಶಾಲಾಕ್ಷ ಪುತ್ರಕಳ, ರಾಜೇಶ್ಚಂದ್ರ ಮಾಸ್ಟರ್, ಕೆ.ಎನ್ ವೆಂಕಟ್ರಮಣ ಹೊಳ್ಳ, ಕಾರ್ತಿಕ್ ಬೇಕಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರೊ. ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.