ಬದಿಯಡ್ಕ: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶುಕ್ರವಾರ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಆಶೀರ್ವಾದಗಳೊಂದಿಗೆ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಹಾಶ್ರೀಚಕ್ರ ನವಾವರಣ ಪೂಜೆ ನಡೆಯಿತು.
ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿಯವರ ತಾಂತ್ರಿಕತ್ವದಲ್ಲಿ ನಡೆದ ಪೂಜೆಯ ಸಂದರ್ಭದಲ್ಲಿ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಮತ್ತು ವೀಣಾವಾದಿನಿ ತಂಡದವರಿಂದ ನವಾವರಣ ಕೃತಿ ಆಲಾಪನೆ ನಡೆಯಿತು. ಮಹಾಪೂಜೆಯ ಸಂದರ್ಭ ಅಷ್ಟಾವಧಾನ ಸೇವೆ ನಡೆಯಿತು. ಶ್ರೀಮಠದ ಭಕ್ತಾದಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.