ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 19 ರಂದು ನಡೆಯಲಿರುವ ಸಾಮೂಹಿಕ ಮಹಾ ಚಂಡಿಕಾ ಯಾಗದ ಅಂಗವಾಗಿ ಭೂಮಿ ಶುದ್ಧಿ, ಭಜನೆ, ಲಲಿತಾ ಸಹಸ್ರನಾಮ ನಡೆಯಿತು. ಯಾಗ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದರು. ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಭಜನಾ ಸಂಘಕ್ಕೆ ತಾಳ ನೀಡಿ ಸರಣಿ ಭಜನೆಗೆ ಚಾಲನೆ ನೀಡಿದರು. ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ಭಕ್ತ ವೃಂದ ಅಣಂಗೂರು ಭಜನೆ ನಡೆಸಿಕೊಟ್ಟರು.