ಶ್ರೀನಗರ : ನೆರೆಯ ದೇಶ ಪಾಕಿಸ್ತಾನದ ರಾಜಕೀಯ ಅಸ್ಥಿರತೆ ಭಾರತ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ರಾಜಕೀಯ ಪರಿಪಾಠ ಭಾರತದ ಮೇಲೆ ಪ್ರಭಾವ: ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ
0
ಮೇ 11, 2023
Tags
ಶ್ರೀನಗರ : ನೆರೆಯ ದೇಶ ಪಾಕಿಸ್ತಾನದ ರಾಜಕೀಯ ಅಸ್ಥಿರತೆ ಭಾರತ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.
ಪುಲ್ವಾಮದ ಟ್ರಾಲ್ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮೆಹಬೂಬಾ ಮಾತನಾಡಿ, 'ಪಾಕಿಸ್ತಾನದ ಆಡಳಿತರೂಢ ಪಕ್ಷದವರು ವಿರೋಧ ಪಕ್ಷದವರ ಜೊತೆಗೆ ರಾಜಕೀಯ ಹೋರಾಟ ಮಾಡುವ ಬದಲು ಏಜನ್ಸಿಗಳನ್ನು ಬಳಸಿ ವಿಪಕ್ಷದವರನ್ನು ಜೈಲಿಗೆ ಹಾಕುತ್ತಿದ್ದಾರೆ.
ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರು, 'ಜುಲ್‌ಫಿಕರ್ ಅಲಿ ಬುಟ್ಟೊ ಪ್ರಧಾನಿ ಆಗಿದ್ದಾಗಿನಿಂದ ಪಾಕ್‌ನಲ್ಲಿ ಜರುಗುತ್ತಿರುವ ಪರಿಸ್ಥಿತಿ ಹೊಸತೇನೂ ಅಲ್ಲ. ಹೊಸ ಸರ್ಕಾರ ಬಂದಾಗಲೆಲ್ಲಾ ವಿರೋಧ ಪಕ್ಷದವರನ್ನು ಜೈಲಿಗೆ ಹಾಕುವ ಪರಿಪಾಠ ಅಲ್ಲಿ ನಡೆದುಕೊಂಡು ಬಂದಿದೆ. ಇದೇ ಧೋರಣೆ ಈಗ ಭಾರತಕ್ಕೂ ಪ್ರಭಾವಿಸಿದೆ' ಎಂದರು.
'ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಪದಚ್ಯುತಿಗೊಳಿಸಿದ್ದು, ಮನೀಷ್ ಸಿಸೋಡಿಯಾ ಅವರನ್ನು ಜೈಲಿಗೆ ಹಾಕಿದ್ದು ಪಾಕ್ ಪರಿಣಾಮದ ನಿದರ್ಶನಗಳು' ಎಂದೂ ಮೆಹಬೂಬಾ ತಿಳಿಸಿದರು.