ಕಾಸರಗೋಡು: ಮಧೂರು ಸನಿಹದ ಪಟ್ಲ ಶ್ರೀ ಭಗವತೀ ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಗೊಂಡಿರುವ ಪಟ್ಲ ಭಂಡಾರದ ಮನೆ ತರವಾಡಿನ ಪಡಯಂಕುಡಿ ಇಲ್ಲಂ ತರವಾಡಿನಲ್ಲಿ ವಯನಾಟ್ ಕುಲವನ್ ದೈವನರ್ತನ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಬೆಳಗ್ಗೆ 10.15ಕ್ಕೆ ಉಗ್ರಾಣ ಮಉಹೂರ್ತ, ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು.
ಮಹೋತ್ಸವದ ಅಂಗವಾಗಿ ಗುರುವಾ ಪಟ್ಲ ಬದಿಮನೆ ತರವಾಡಿನಿಂದ ಕುಂಜತ್ತಾಯ ಚಾಮುಂಡಿ ದೈವದ ಭಂಡಾರ ಆಗಮಿಸಿ, ಸಂಜೆ ಕುಂಜತ್ತಾಯ ಚಾಮುಂಡಿ ದೈವದ ಕೋಲ ಹಾಗೂ ಗುಳಿಗ ದೈವದ ಕೋಲ ನಡೆಯಿತು.
6ರಂದು ಬೆಳಗ್ಗೆ 4ಕ್ಕೆ ಕೊರತ್ತಿಯಮ್ಮನ ಪುರಪ್ಪಾಡ್, 7.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಪುರಪ್ಪಾಡ್, ಸಂಜೆ 4ಕ್ಕೆ ಕಾರ್ನೋನ್ ದೈವದ ವೆಳ್ಳಾಟ, 6ಕ್ಕೆ ಕೋರಚ್ಚನ್ ದೈವದ ವೆಳ್ಳಾಟ, ರಾತ್ರಿ 9ಕ್ಕೆ ಕಂಡನಾರಕ್ಕೇಳನ್ ದೈವದ ವೆಳ್ಳಾಟ, ಬಪ್ಪಿಡಲ್ ಸಮಾರಂಭ ನಡೆಯುವುದು. ರಾತ್ರಿ 12ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ತೊಡಙಳ್, 1ಗಂಟೆಗೆ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟ ನಡೆಯುವುದು.
7ರಂದು ಬೆಳಗ್ಗೆ 7ಕ್ಕೆ ಶ್ರೀ ಕಾರ್ನೋನ್ ದೈವ, 9ಕ್ಕೆ ಶ್ರೀ ಕೋರಚ್ಚನ್ ದೈವದ ಪುರಪ್ಪಾಡ್, 11.30ಕ್ಕೆ ಶ್ರೀ ಕಂಡನಾರ್‍ಕೇಳನ್ ದೈವ, ಮಧ್ಯಾಹ್ನ 3ಕ್ಕೆ ಶ್ರೀ ವಯನಾಟ್ ದೈವದ ಪುರಪ್ಪಾಡ್, ಸೂಟೆ ಒಪ್ಪಿಸುವಿಕೆ, 4ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಪುರಪ್ಪಾಡ್, ರಾತ್ರಿ 8ಕ್ಕೆ ಶ್ರೀ ವಯನಾಟ್‍ಕುಲವನ್ ಹಾಗೂ ವಿಷ್ಣುಮೂರ್ತಿ ದೈವ ಕುದ್ರೆಪ್ಪಾಡಿ ಗುತ್ತುವಿಗೆ ಭೇಟಿ ಕಾರ್ಯಕ್ರಮ ನಡೆಯುವುದು.