ಕಾಸರಗೋಡು: ತಮ್ಮ ಜೊತೆ ನಟಿಸಲು ಬಂದ ನಟಿಯೊಂದಿಗೆ ಅಸಭ್ಯವಾಗಿ ಮಾತನಾಡಿಸಿದ ಪ್ರಕರಣದಲ್ಲಿ ಚಲನಚಿತ್ರ ನಟರೂ ಆದ ನಿವೃತ್ತ ಡಿವೈಎಸ್ಪಿ ಮಧುಸೂದನನ್ ಅವರ ವಿಚಾರಣೆ ಮುಂದುವರಿದಿದೆ.
ನಿನ್ನೆ ಕೊಲ್ಲಂ ಮೂಲದ ಮಹಿಳೆಯೊಬ್ಬರ ದೂರಿನ ಮೇರೆಗೆ ಬೇಕಲ ಪೋಲೀಸರು ಮಧುಸೂದನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಕಿರುಕುಳ ನೀಡಲು ಯತ್ನಿಸಿದ್ದಾಗಿ ಮಹಿಳೆ ಪೆÇಲೀಸರಿಗೆ ದೂರು ನೀಡಿದ್ದಾಳೆ. ಪೆರಿಯಾದ ಹೋಮ್‍ಸ್ಟೇಯಲ್ಲಿ ತನಗೆ ಕೆಟ್ಟ ಅನುಭವವಾಗಿದೆ ಎಂದು ನಟಿ ಹೇಳುತ್ತಾರೆ. ತನಗೆ ಬಲವಂತವಾಗಿ ಬಿಯರ್ ಕುಡಿಸಿ ತನ್ನ ಕೊಠಡಿಯಲ್ಲಿ ಮಲಗುವಂತೆ ಹೇಳಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆ ವ್ಯಕ್ತಿ ತನ್ನೊಂದಿಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಮಹಿಳೆ ದೂರಲ್ಲಿ ತಿಳಿಸಿದ್ದಾರೆ.
ತೊಂಡಿಮುದಲ್ ದೃಕ್ಷಾಕ್ಷಿಯುಂ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟವರು ಮಧುಸೂದನನ್. ಬಳಿಕ ಅವರು ಆಂಡ್ರಾಯ್ಡ್ ಕುಂಞಪ್ಪನ್‍ನಲ್ಲಿ ಪೂರ್ಣ ಪಾತ್ರವನ್ನು ನಿರ್ವಹಿಸಿದ್ದರು. ಪ್ರಸ್ತುತ ಅವರು ಹೊಸದುರ್ಗ ಬಾರ್‍ನಲ್ಲಿ ವಕೀಲರಾಗಿದ್ದಾರೆ.