ಮಂಜೇಶ್ವರ: ಕೇರಳ ರಾಜ್ಯ ನವ ಕೇರಳ ಮಿಷನ್ ಯೋಜನೆಯ ಭಾಗವಾಗಿ "ಮಾಲಿನ್ಯ ಮುಕ್ತ ಕೇರಳ " ಎಂಬ ವಿಷಯದ ಬಗ್ಗೆ ಕಾರ್ಯಗಾರ ಮೀಯಪದವು ವಿ ಎ ಯು ಪಿ ಶಾಲಾ ಸಭಾಂಗಣದಲ್ಲಿ ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತಿ ಕಾರ್ಯದರ್ಶಿ. ನಂದಗೋಪಾಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನವ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಬಾಲಕೃಷ್ಣನ್ ಹಾಗೂ ಮೀಂ|ಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಂ ಪ್ರಭಾಕರ ರೈ ತರಬೇತಿ ನಡೆಸಿದರು.
ಕಾರ್ಯಕ್ರಮದಲ್ಲಿ ಮೀಂಜ ಪಂಚಾಯತಿ ಉಪಾಧ್ಯಕ್ಷÀ ಜಯರಾಮ ಬಲ್ಲಂಗುಡೇಲು, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ. ರಾಧಾಕೃಷ್ಣ ಭಟ್, ಮೀಂಜ ಪಂಚಾಯತಿ ಸದಸ್ಯರು, ಪಂಚಾಯತಿ ಐಸಿಡಿಎಸ್ ಮೇಲ್ವಿಚಾರಕಿ, ಶಾಲಾ ಪ್ರಬಂಧಕರು, ಮುಖ್ಯೋಪಾಧ್ಯಾಯರು, ಹೊಮಿಯೋ ಆಸ್ಪತ್ರೆಯ ವೈದ್ಯಾಧಿಕಾರಿ, ಮೀಂಜ ಕುಟುಂಬಶ್ರೀ ಸಿ ಡಿ ಎಸ್ ಅಧ್ಯಕ್ಷೆ ಶಾಲಿನಿ ಬಿ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಮೀಂಜ ಕುಟುಂಬಶ್ರೀ ಸಿ ಡಿ ಎಸ್ ಸದಸ್ಯೆಯರು, ಪಂಚಾಯತಿ ಹಸಿರು ಕ್ರಿಯಾಸೇನಾ ಸದಸ್ಯರು, ಪಂಚಾಯತಿ ಸಿಬ್ಬಂದಿ ವರ್ಗ, ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ವ್ಯಾಪಾರ ವ್ಯವಸಾಯ ಏಕೋಪನಾ ಸಮಿತಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ನೇತಾರರು, ಎಸ್ ಸಿ- ಎಸ್ ಟಿ ಪ್ರೊಮೋಟರ್, ಸಾಕ್ಷರತಾ ಪ್ರೇರಕ್, ಕುಟುಂಬ ಶ್ರೀ ಕಾರ್ಯಕರ್ತೆಯರು ಹಾಗೂ ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಮೀಂಜ ಪಂಚಾಯತಿ ಮಟ್ಟದ ನಿರೀಕ್ಷಕ ಸಮಿತಿ ಹಾಗೂ ಪ್ರತಿ ವಾರ್ಡು ಮಟ್ಟದ ನಿರೀಕ್ಷಕ ಸಮಿತಿಯನ್ನು ರೂಪಿಕರಿಸಲಾಯಿತು. ಮೀಂಜ ಗ್ರಾಮ ಪಂಚಾಯತಿ ಆರೋಗ್ಯ- ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ ಎಲಿಯಾಣ ಕಾರ್ಯಕ್ರಮದ ನೇತೃತ್ವ ವಹಿಸಿದರು. ಪಂಚಾಯತಿ ಸಹ ಕಾರ್ಯದರ್ಶಿ ಮಣಿ ಕುಟ್ಟನ್ ವಂದಿಸಿದರು.