ಕೊಟ್ಟಾರಕ್ಕರ: ಕೊಟ್ಟಾರಕ್ಕರದಲ್ಲಿ ಯುವ ವೈದ್ಯರೊಬ್ಬನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಬಳಿಕ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆಯನ್ನು ಯುವಮೋರ್ಚಾ ಅಧ್ಯಕ್ಷ ಸಿ.ಆರ್. ಪ್ರಪುಲ್ ಕೃಷ್ಣನ್ ತೀವ್ರವಾಗಿ ಟೀಕಿಸಿದ್ದಾರೆ. ಆರೋಗ್ಯ ಸಚಿವರು ಕೇರಳಕ್ಕೆ ನಾಚಿಕೆಗೇಡು. ವೀಣಾ ಜಾರ್ಜ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಯುವಮೋರ್ಚಾ ಆಗ್ರಹಿಸಿದೆ. ಕೇರಳ ದರೋಡೆಕೋರರ ತವರೂರಾಗಿದೆ. ಕೇರಳದಲ್ಲಿ ವೈದ್ಯರೂ ಸುರಕ್ಷಿತವಾಗಿಲ್ಲ ಎಂದು ಪ್ರಪುಲ್ ಕೃಷ್ಣನ್ ಹೇಳಿದರು.
'ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ನಾಚಿಕೆಯಿಲ್ಲದೆ ಮಧ್ಯಪ್ರವೇಶಿಸಿದ ಪೋಲೀಸರನ್ನು ವಯನಾಡ್ ಕಂಡರೆ, ಕೊಲೆಯಾದ ವೈದ್ಯೆಯ ಅನುಭವದ ಬಗ್ಗೆ ಆರೋಗ್ಯ ಸಚಿವರು ಮಾತನಾಡುವುದನ್ನು ಕೇರಳ ಇದೀಗ ನೋಡಿದೆ. ಈ ಆರೋಗ್ಯ ಸಚಿವರು ಕೇರಳಕ್ಕೆ ನಾಚಿಕೆಗೇಡು. ಆದಷ್ಟು ಬೇಗ ವೀಣಾ ಜಾರ್ಜ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು. ವೋಟ್ ಬ್ಯಾಂಕ್ ರಾಜಕಾರಣದ ಹೆಸರಲ್ಲಿ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಂಡ ಮುಖ್ಯಮಂತ್ರಿ ಕೇರಳೀಯರ ಸಹನೆಗೆ ಸವಾಲು ಹಾಕುತ್ತಿದ್ದಾರೆ. ವೀಣಾ ಜಾರ್ಜ್ ಅವರನ್ನು ಸಂಪುಟದಿಂದ ಹೊರಹಾಕಬೇಕು ಮತ್ತು ವೈದ್ಯರ ಜೀವ ರಕ್ಷಣೆಗೆ ಮುಖ್ಯಮಂತ್ರಿ ಸಿದ್ಧರಾಗಿರಬೇಕು ಎಂದು ಪ್ರಫುಲ್ ಕೃಷ್ಣನ್ ಹೇಳಿದ್ದಾರೆ.
ಇಂದು ಬೆಳಗ್ಗೆ ಈ ಕ್ರೂರ ಘಟನೆ ನಡೆದಿದೆ. ಕೊಟ್ಟಾಯಂ ಮೂಲದ 23 ವರ್ಷದ ವೈದ್ಯೆ ವಂದನಾ ದಾಸ್ ಪೆÇಲೀಸರ ಸಮ್ಮುಖದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ನೆಡುಂಬನ ಯುಪಿ ಶಾಲೆಯ ಶಿಕ್ಷಕ ಪೂಯಪಲ್ಲಿ ಮೂಲದ ಸಂದೀಪ್ (42) ಹಲ್ಲೆ ನಡೆಸಿರುವವ. ವ್ಯಸನಮುಕ್ತ ಕೇಂದ್ರದಿಂದ ಕರೆತರಲಾಗಿತ್ತು. ಸಂದೀಪ್ ಮನೆ ಬಳಿಯ ಜನರೊಂದಿಗೆ ಹೊಡೆದಾಟದಲ್ಲಿ ಗಾಯಗೊಂಡಿದ್ದ. ನಂತರ ಸಂದೀಪ್ ನನ್ನು ಕೊಟ್ಟಾರಕ್ಕರ ಆಸ್ಪತ್ರೆಗೆ ಕರೆತಂದು ಗಾಯಕ್ಕೆ ಹೊಲಿಗೆ ಹಾಕುತ್ತಿದ್ದಾಗ ಸಂದೀಪ್ ಅಲ್ಲೇ ಇದ್ದ ಕತ್ತರಿ ತೆಗೆದುಕೊಂಡು ವೈದ್ಯರ ಕುತ್ತಿಗೆಗೆ ಇರಿದಿದ್ದಾನೆ.