ಸಿಂಗಪುರ: ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ ಮೇ 19ರಂದು ತೆರಳಿ ನಾಪತ್ತೆಯಾಗಿರುವ ಭಾರತ ಮೂಲದ ಪರ್ವತಾರೋಹಿಯ ಪತ್ತೆ ಇನ್ನೂ ಆಗಿಲ್ಲ. ಪರ್ವತಾರೋಹಿಯ ಪತ್ನಿ ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಿಂಗಪುರ: ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ ಮೇ 19ರಂದು ತೆರಳಿ ನಾಪತ್ತೆಯಾಗಿರುವ ಭಾರತ ಮೂಲದ ಪರ್ವತಾರೋಹಿಯ ಪತ್ತೆ ಇನ್ನೂ ಆಗಿಲ್ಲ. ಪರ್ವತಾರೋಹಿಯ ಪತ್ನಿ ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪರ್ವತಾರೋಹಿಯ ಪತ್ತೆಗೆ ರಕ್ಷಣಾ ತಂಡ ಹೆಚ್ಚಿನ ಶ್ರಮದ ನಡುವೆಯೂ ನೆಲೆ ಪತ್ತೆಯಾಗಿಲ್ಲ ಎಂದು ಪತಿ ಶ್ರೀನಿವಾಸ್ ಸೈನಿಸ್ ದತ್ತಾತ್ರೇಯ ಅವರ ವಿವಿಧ ಚಿತ್ರಗಳನ್ನು ಹಂಚಿಕೊಂಡಿರುವ ಸುಷ್ಮಾ ಸೋಮ ಅವರು ತಿಳಿಸಿದ್ದಾರೆ.
'39 ವರ್ಷದ ಶ್ರೀನಿವಾಸ್ ಬದುಕನ್ನು ತುಂಬ ಖುಷಿಯಿಂದ ಕಳೆದಿದ್ದರು. ಈಗ ಅವರು ತಾವು ಇಷ್ಟಪಡುತ್ತಿದ್ದ ಪರ್ವತದಲ್ಲಿಯೇ ಇದ್ದಾರೆ' ಎಂದು ಸುಷ್ಮಾ ಅವರ ಮಾತು ಉಲ್ಲೇಖಿಸಿದ ಸ್ಟ್ರೇಟ್ ಟೈಮ್ಸ್ ವರದಿ ಮಾಡಿದೆ.
ಸಿಂಗಪುರದಿಂದ ಏಪ್ರಿಲ್ 1ರಂದು ನಿರ್ಗಮಿಸಿದ್ದ ಶ್ರೀನಿವಾಸ್, ಮೇ 19ರಂದು ಮೌಂಟ್ ಎವರೆಸ್ಟ್‌ಗೆ ಹೋಗಿದ್ದರು. ಪರ್ವತಾರೋಹಣಕ್ಕೆ ತೆರಳಿದ್ದ ಪ್ರಥಮ ಸಿಂಗಪುರ-ಭಾರತ ಮೂಲದವರಾಗಿದ್ದರು ಎಂದು ವರದಿ ತಿಳಿಸಿದೆ.