ಮಧ್ಯಪ್ರದೇಶ: ಜೀವಂತ ನವಿಲಿನ ಗರಿಗಳನ್ನು ಕಿತ್ತು ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬನನ್ನು ಮಧ್ಯಪ್ರದೇಶದ ಪೊಲೀಸರು ಹುಡುಕಾಡುತ್ತಿದ್ದಾರೆ.
ಜೀವಂತ ನವಿಲಿನ ಗರಿ ಕಿತ್ತು ಚಿತ್ರಹಿಂಸೆ; ದುಷ್ಕರ್ಮಿಗಾಗಿ ಪೊಲೀಸರ ಹುಡುಕಾಟ
0
ಮೇ 21, 2023
Tags
ಮಧ್ಯಪ್ರದೇಶ: ಜೀವಂತ ನವಿಲಿನ ಗರಿಗಳನ್ನು ಕಿತ್ತು ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬನನ್ನು ಮಧ್ಯಪ್ರದೇಶದ ಪೊಲೀಸರು ಹುಡುಕಾಡುತ್ತಿದ್ದಾರೆ.
'ವಿಡಿಯೊದಲ್ಲಿ ಕಂಡುಬರುವ ಬೈಕ್ ಸಂಖ್ಯೆ ಆಧರಿಸಿ ಯುವಕನನ್ನು ಗುರುತಿಸಲಾಗಿದೆ. ರೀತಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಅತುಲ್ ವಾಸಿಸುತ್ತಿರುವುದು ತಿಳಿದುಬಂದಿದೆ' ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಗೌರವ್ ಶರ್ಮಾ ಹೇಳಿದ್ದಾರೆ.
'ಅತುಲ್‌ನನ್ನು ಬಂಧಿಸಲು ಪೊಲೀಸರು ಆತನ ಮನೆಗೆ ಹೋಗಿದ್ದು, ಅತುಲ್ ತಲೆಮರೆಸಿಕೊಂಡಿದ್ದಾನೆ. ಆರೋಪಿಯನ್ನು ಕಂಡರೆ ಮಾಹಿತಿ ನೀಡುವಂತೆ ಸ್ಥಳೀಯರು ಮತ್ತು ಮಾಧ್ಯಮವರಿಗೆ ಪೊಲೀಸರು ಸೂಚಿಸಿದ್ದಾರೆ ' ಎಂದು ಶರ್ಮಾ ತಿಳಿಸಿದ್ದಾರೆ.