HEALTH TIPS

ವಿದ್ಯುತ್ ಅಡಚಣೆ; ಕತ್ತಲಲ್ಲೇ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

                 ಡಿಶಾ ಇಲ್ಲಿನ ಮಹಾರಾಜ ಶ್ರೀ ರಾಮಚಂದ್ರ ಭಂಜದೇಯೊ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿದ್ದರು. ರಾಷ್ಟ್ರಪತಿಗಳ ಭಾಷಣದ ವೇಳೆ ವಿದ್ಯುತ್‌ ಅಡಚಣೆ ಉಂಟಾಗಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

             ರಾಷ್ಟ್ರಪತಿಗಳು ಭಾಷಣ ಆರಂಭಿಸಿದ ಕೆಲವು ನಿಮಿಷಗಳಲ್ಲೇ ಕರೆಂಟ್‌ ಕಟ್‌ ಆಗಿದೆ. ಇದರಿಂದ ಸುಮಾರು 10 ನಿಮಿಷಗಳ ಕಾಲ (11.56-12.05ರವರೆಗೆ) ಇಡೀ ಸಭಾಂಗಣದಲ್ಲಿ ಕತ್ತಲೆ ಆವರಿಸಿದೆ. ವಿದ್ಯುತ್‌ ಅಡಚಣೆಯಾದರೂ ಸಭಾಂಗಣದ ಮೈಕ್‌ ಮತ್ತು ಹವಾನಿಯಂತ್ರಣ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಮೈಕ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ರಾಷ್ಟ್ರಪತಿಗಳು ತಮ್ಮ ಭಾಷಣವನ್ನು ಮುಂದುವರಿಸಿದರು. ಕತ್ತಲೆಯಲ್ಲಿಯೂ ಸಭಾಂಗಣದಲ್ಲಿ ಸೇರಿರುವ ಜನರ ರಾಷ್ಟ್ರಪತಿಗಳ ಭಾಷಣವನ್ನು ತಾಳ್ಮೆಯಿಂದ ಕೇಳಿದ್ದಾರೆ.

                  ವಿದ್ಯುತ್‌ ಅಡಚಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಒಡಿಶಾ ಪವರ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್‌ನ ಸಿಇಒ ಭಾಸ್ಕರ್ ಸರ್ಕಾರ್, 'ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಸಭಾಂಗಣಕ್ಕೆ ವಿದ್ಯುತ್‌ ಪೂರೈಕೆ ಆಗುತ್ತಿತ್ತು. ವಿದ್ಯುತ್‌ ತಂತಿಯಲ್ಲಿನ ದೋಷ ವಿದ್ಯುತ್‌ ಅಡಚಣೆಗೆ ಕಾರಣವಾಗಿರಬಹುದು' ಎಂದು ಹೇಳಿದರು.

ರಾಷ್ಟ್ರಪತಿಯವರ ಭಾಷಣದ ವೇಳೆ ವಿದ್ಯುತ್ ಅಡಚಣೆಯಾಗಿರುವುದರ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ ಸಂತೋಷ್ ಕುಮಾರ್ ತ್ರಿಪಾಠಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಕ್ಷಮೆಯಾಚಿಸಿದ್ದಾರೆ.

                    ಸುದ್ದಿಗಾರರೊಂದಿಗೆ ಮಾತನಾಡಿದ ಕುಲಪತಿ ಸಂತೋಷ್‌ ಕುಮಾರ್ ತ್ರಿಪಾಠಿ, 'ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಈ ಘಟನೆಯಿಂದ ತಲೆತಗ್ಗಿಸುವಂತಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಇದಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

                          'ಸರ್ಕಾರಿ ಸ್ವಾಮ್ಯದ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತವು ಕಾರ್ಯಕ್ರಮಕ್ಕೆ ಜನರೇಟರ್ ಅನ್ನು ಪೂರೈಸಿದೆ. ಅದಾಗ್ಯೂ ವಿದ್ಯುತ್‌ ಅಡಚಣೆ ಉಂಟಾಗಿದೆ. ವಿದ್ಯುತ್ ಅಡಚಣೆಗೆ ಕಾರಣವೇನು? ಎಂದು ಅವರಲ್ಲಿ ಕೇಳಲಾಗುವುದು' ಎಂದು ಕುಲಪತಿ ತಿಳಿಸಿದರು.

                   ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯ ರೈರಂಗಪುರದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು 25 ಜುಲೈ 2022ರಲ್ಲಿ ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು. ರಾಷ್ಟ್ರಪತಿ ಗದ್ದುಗೆಗೆ ಏರಿದ ಮೊದಲ 'ಆದಿವಾಸಿ ಮಹಿಳೆ' ಎಂದು ಹೆಸರುವಾಸಿಯಾಗಿದ್ದರು. ದ್ರೌಪದಿ ಮುರ್ಮು ಅವರನ್ನು ಒಡಿಶಾದ ಮಣ್ಣಿನ ಮಗಳು ಎಂದು ಕರೆಯಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries