ಮಂಜೇಶ್ವರ: ಬಾಕುಡ ಸಮಾಜ ಕೇಂದ್ರ ಸಮಿತಿಯ ನೇತೃತ್ವದಲ್ಲಿ ರಂಗಚೇತನ ಕಾಸರಗೋಡು ಇದರ ಸಹಬಾಗಿತ್ವದಲ್ಲಿ ಜಿ.ಡಬ್ಲ್ಯು.ಎಲ್.ಪಿ.ಎಸ್. ಮಂಜೇಶ್ವರ ಶಾಲೆಯಲ್ಲಿ ದ್ವಿದಿನ ಸಹವಾಸ ಶಿಬಿರ ಜರಗಿತು. ಬಾಕುಡ ಸಮುದಾಯದ ಹದಿನೆಂಟು ದೈವಸ್ಥಾನಗಳ ದೈವ ಪಾತ್ರಿಗಳು ದೀಪ ಪ್ರಜ್ವಲನೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಮಾಜಿಕ ಮುಂದಾಳು ವಿಜಯ್ ಅಂಬ್ಲಮೊಗರು ಸತ್ಯದ ಬೊಲ್ಪು ಭಾವಚಿತ್ರವನ್ನು ಅನಾವರಣಗೊಳಿಸಿ ಶಿಬಿರ ನಿರ್ದೇಶಕ ಅಶೋಕ್ ಕೊಡ್ಲಮೊಗರು ಅವರಿಗೆ ಹಸ್ತಾಂತರಿಸುವುದರೊಂದಿಗೆ ಶಿಬಿರಕ್ಕೆ ಚಾಲನೆ ನೀಡಿದರು. ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷ ವಿಜಯ್ ಪಂಡಿತ್ ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೃಷ್ಣವೇಣಿ ಟೀಚರ್, ಸದಾಶಿವ ಬಾಲಮಿತ್ರ, ದೈವ ಪಾತ್ರಿ ಭಾಸ್ಕರನ್ ಪಚ್ಲಂಪಾರೆ, ನ್ಯಾಯವಾದಿ. ಭರತ್ ರಾಜ್ ಅಟ್ಟೆಗೋಳಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಏಕಾನಂದ ಮಂಗಳೂರು, ಚಂದ್ರಶೇಖರ ಅಂಗಡಿಪದವು, ವಿಠಲ ನಾರಾಯಣ ಬಂಬ್ರಾಣ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಸಮಿತಿಯ ಅಧ್ಯಕ್ಷ ಸುಮಂಗಳ ಪೊಸೋಟ್ ಮತ್ತು ಸುಮಿತ್ರಾ ಬಂಬ್ರಾಣ ಪ್ರಾರ್ಥನೆ ಹಾಡಿದರು. ಶಿಬಿರ ನಿರ್ದೇಶಕ ಅಶೋಕ್ ಕೊಡ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವನ್ ಹೊಸಂಗಡಿ ಸ್ವಾಗತಿಸಿ, ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಕಾರ್ಯದರ್ಶಿ ರಾಜೇಶ್ ಕೊಡ್ಲಮೊಗರು ವಂದಿಸಿದರು. ಸುರೇಶ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.