ಬದಿಯಡ್ಕ: ಬದಿಯಡ್ಕ ಪಂಚಾಯತಿ ಬಂಟರ ಸಂಘದ ಬಂಟರ ಸಮ್ಮಿಲನ ಉದ್ಘಾಟನಾ ಸಮಾರಂಭ ಬದಿಯಡ್ಕ ನಮ್ಮ ಜೀವನ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕುಂಬಳೆ ವಲಯ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಉದ್ಘಾಟಿಸಿದರು. ಬದಿಯಡ್ಕ ಬಂಟ್ಸ್ ಸರ್ವಿಸ್ ಸೊಸೈಟಿಯ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲಗುತ್ತು, ರಮಾನಾಥ ರೈ ಮೇಗಿನ ಕಡಾರು, ಪ್ರಭಾಕರ ರೈ ಮೇಗಿನ ಕಡಾರು, ಅಶೋಕ್ ರೈ ಕೊರೆಕ್ಕಾನ, ಗಿರೀಶ್ ರೈ ವಳಮಲೆ ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕಾರ್ಯದರ್ಶಿ ಸಂತೋμï ಶೆಟ್ಟಿ ವಂದಿಸಿದರು. ಬಳಿಕ ವಿವಿಧ ಸ್ಪರ್ಧೆಗಳು ಜರಗಿತು.