ನವದೆಹಲಿ: ನೌಕಾಪಡೆಯ ನಿವೃತ್ತ ಕಮಾಂಡರ್ ಟಾಮಿ ಅಭಿಲಾಷ್ ಅವರು ಹಾಯಿದೋಣಿಯಲ್ಲಿ ಕೈಗೊಂಡಿದ್ದ ಪರ್ಯಟನೆಯನ್ನು ಶನಿವಾರ ಪೂರ್ಣಗೊಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನವದೆಹಲಿ: ನೌಕಾಪಡೆಯ ನಿವೃತ್ತ ಕಮಾಂಡರ್ ಟಾಮಿ ಅಭಿಲಾಷ್ ಅವರು ಹಾಯಿದೋಣಿಯಲ್ಲಿ ಕೈಗೊಂಡಿದ್ದ ಪರ್ಯಟನೆಯನ್ನು ಶನಿವಾರ ಪೂರ್ಣಗೊಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಒಂಟಿಯಾಗಿ ವಿಶ್ವಪರ್ಯಟನೆ ನಡೆಸುವ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಪಾಲ್ಗೊಂಡಿದ್ದ ಅವರು, 236 ದಿನಗಳ ಕಾಲ ಸಮುದ್ರಯಾನದ ನಂತರ ಫ್ರೆಂಚ್ ಕರಾವಳಿ ತಲುಪಿ, ದ್ವಿತೀಯ ಸ್ಥಾನ ಪಡೆದರು.
ದಕ್ಷಿಣ ಆಫ್ರಿಕಾದ ಕಿರ್ಸ್ಟನ್ ನ್ಯೂಶಫರ್ ಪ್ರಥಮ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದರು.
1968ರಲ್ಲಿ ಸರ್ ರಾಬಿನ್ ನಾಕ್ಸ್ ಜಾನ್ಸ್‌ಟನ್ ಅವರು ಭಾರತದಲ್ಲಿ ತಯಾರಿಸಿದ್ದ 'ಸುಹೈಲಿ' ಎಂಬ ದೋಣಿ ಬಳಸಿ ಒಂಟಿಯಾಗಿ ವಿಶ್ವಪರ್ಯಟನೆ ಮಾಡಿದ್ದರು. 312 ದಿನಗಳಲ್ಲಿ ತಮ್ಮ ಯಾನ ಪೂರ್ಣಗೊಳಿಸಿದ್ದರು. ಅವರ ಈ ಸಾಹಸಕ್ಕೆ 50 ವರ್ಷ ತುಂಬಿದ ಪ್ರಯುಕ್ತ 'ಗೋಲ್ಡನ್ ಗ್ಲೋಬ್ ರೇಸ್' ಹೆಸರಿನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.