ಬದಿಯಡ್ಕ: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಡನೀರು ಸಂಸ್ಥೆಯ ನೇತೃತ್ವದಲ್ಲಿ ಎಡನೀರಿನಲ್ಲಿ ಐದು ದಿನಗಳ ಕನ್ನಡ ಸಂಸ್ಕೃತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ನಿವೃತ್ತ ಶಿಕ್ಷಕ ಮಾಧವ ಹೇರಳ ದೀಪಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷೆ ವಿದುಷಿ ಅನುಪಮಾ ರಾಘವೇಂದ್ರ ಸ್ವಾಗತಿಸಿದರು. ಮೊದಲ ದಿನದ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ಮಲ್ ಕುಮಾರ್ ಮಾತನಾಡಿ ಜೀವನ ಮೌಲ್ಯ, ಜೀವನ ಪಾಠ, ಮಕ್ಕಳು ಬದುಕಬೇಕಾದ ರೀತಿ, ಒಬ್ಬ ಅಧ್ಯಾಪಕನ ಹೊಣೆಗಾರಿಕೆ, ತಂದೆ ತಾಯಿಗಳ ಕರ್ತವ್ಯ ಹೀಗೆ ಹತ್ತು ಹಲವು ವಿಷಯಗಳನ್ನು ಸರಳವಾಗಿ ಪುಟ್ಟಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟರು. ಒಂದಷ್ಟು ಆಟ, ಒಂದಷ್ಟು ಮಾತು, ಇನ್ನೊಂದಷ್ಟು ಚಿಂತಾನಾರ್ಹ ವಿಡಿಯೋ ತುಣುಕುಗಳು, ಮತ್ತೊಂದಷ್ಟು ಹಾಡು, ಕತೆ ಎಲ್ಲವನ್ನು ಸುಂದರವಾಗಿ ಪೋಣಿಸಿ ಮಕ್ಕಳ ಮುಂದೆ ತೆರೆದಿಟ್ಟರು.