ಕಠ್ಮಂಡು/ ಸಿಂಗಪುರ: ಭಾರತ ಮೂಲದ ಸಿಂಗಪುರ ನಿವಾಸಿ ಹಾಗೂ ಉದ್ಯಮಿ ಶ್ರೀನಿವಾಸ್ ಸೈನಿಸ್ ದತ್ತಾತ್ರೇಯ ಎಂಬುವರು ಮೌಂಟ್ ಎವರೆಸ್ಟ್ ಶಿಖರದಿಂದ ವಾಪಸ್ಸಾಗುವ ವೇಳೆ ನಾಪತ್ತೆಯಾಗಿದ್ದಾರೆ.
ಕಠ್ಮಂಡು/ ಸಿಂಗಪುರ: ಭಾರತ ಮೂಲದ ಸಿಂಗಪುರ ನಿವಾಸಿ ಹಾಗೂ ಉದ್ಯಮಿ ಶ್ರೀನಿವಾಸ್ ಸೈನಿಸ್ ದತ್ತಾತ್ರೇಯ ಎಂಬುವರು ಮೌಂಟ್ ಎವರೆಸ್ಟ್ ಶಿಖರದಿಂದ ವಾಪಸ್ಸಾಗುವ ವೇಳೆ ನಾಪತ್ತೆಯಾಗಿದ್ದಾರೆ.
ಶ್ರೀನಿವಾಸ್ ಸೈನಿಸ್ ದತ್ತಾತ್ರೇಯ ಅವರು ಪರ್ವತಾರೋಹಿಯಾಗಿದ್ದರು.
ಶ್ರೀನಿವಾಸ್ ಅವರನ್ನು ಸರ್ಕಾರ ಶೀಘ್ರದಲ್ಲೇ ಪತ್ತೆ ಹಚ್ಚಬೇಕು ಎಂದು ಅವರ ಕುಟುಂಬದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶ್ರೀನಿವಾಸ್ ಭೂಮಿಯಿಂದ 8,400 ಅಡಿ ಎತ್ತರವಿರುವ ಕ್ಯಾಂಪ್ 4ರಿಂದ ಶುಕ್ರವಾರ ನಾಪತ್ತೆಯಾಗಿದ್ದಾರೆ' ಎಂದು ಪರ್ವತಾರೋಣ ಆಯೋಜಿಸಿದ್ದ ಮಿಂಗ್ಮ ಶೆರ್ಪಾ ಹೇಳಿದರು.
ಶೆರ್ಪಾ ಮಾರ್ಗದರ್ಶಿಗಳ ಸಹಾಯದಿಂದ ಶ್ರೀನಿವಾಸ್ ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಅವರ ಬಗ್ಗೆ ಯಾವುದೇ ಸುಳಿವು ದೊರಕುತ್ತಿಲ್ಲ ಎಂದು ಹೇಳಿದ್ದಾರೆ.
'ಶ್ರೀನಿವಾಸ್ ಅವರು ಮೌಂಟ್ ಎವರೆಸ್ಟ್ ಶಿಖರವೇರಲು ಕಳೆದ ತಿಂಗಳೇ ಸಿಂಗಪುರದಿಂದ ನೇಪಾಳಕ್ಕೆ ಬಂದಿದ್ದರು. ಅವರು ಶಿಖರದಿಂದ ವಾಪಸ್ಸಾಗುವಾಗ ಹಿಮಹುಣ್ಣು ಕುಸಿತ ಹಾಗೂ ಎತ್ತರದ ಸ್ಥಳದಲ್ಲಿ ಉಂಟಾಗುವ ಉಸಿರಾಟದ ಸಮಸ್ಯೆ ಎದುರಿಸುತ್ತಿರಬಹುದು ಎಂದು ಅವರ ಸಂಬಂಧಿ ದಿವ್ಯಾ ಹೇಳಿದ್ದಾರೆ.