ಪತ್ತನಂತಿಟ್ಟ: ಶಬರಿಮಲೆಯಲ್ಲಿ ಪ್ರತಿಷ್ಠಾ ದಿನಾಚರಣೆ ಭಕ್ತರು ಅಯ್ಯಪ್ಪನ ದರ್ಶನ ಪಡೆದರು. ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸಿದ್ದರು.
ಅಯ್ಯಪ್ಪ ಸನ್ನಿಧಿಯಲ್ಲಿ ತಂತ್ರಿ ಕಂಠಾರರ್ ಮಹೇಶ್ ಮೋಹನ್ ನೇತೃತ್ವದಲ್ಲಿ ಕಲಭ ಕಲಶ ಹಾಗೂ ಲಕ್ಷಾರ್ಚನೆ ನಡೆಯಿತು.
ನಂತರ ಮಹಾಪೂಜೆ ನಡೆಯಿತು. ಆ ಬಳಿಕ ಗರ್ಭಗೃಹದ ಬಾಗಿಲು ಮುಚ್ಚಲಾಯಿತು. ಇನ್ನು ಮಿಥುನಮಾಸದ ಪೂಜೆಗಳಿಗಾಗಿ ಶಬರಿಮಲೆ ಬಾಗಿಲು ಜೂನ್ 15 ರಂದು ತೆರೆಯಲಾಗುತ್ತದೆ.