ತ್ರಿಶೂರ್: ಕೇರಳದ ಮೊದಲ ಮಹಿಳಾ ತಂತ್ರಿ ಎಂಬ ಹೆಗ್ಗಳಿಕೆಗೆ ತ್ರಿಶೂರಿನ ಜ್ಯೋತ್ಸಾ ಪದ್ಮನಾಭನ್ ಪಾತ್ರರಾಗಿದ್ದಾರೆ.ಇವರು ತ್ರಿಶೂರ್‍ನ ಪೈಂಕನ್ನಿಕಾವ್ ಭದ್ರಕಾಳಿ ದೇವಸ್ಥಾನದಲ್ಲಿ ದೇವಿಯನ್ನು ಪೂಜಿಸುವ ತಂತ್ರಿಯಾಗಿ ನೇಮಕವಾಗಿದ್ದಾರೆ.
ಜ್ಯೋತ್ಸಾ ಕೇರಳದಲ್ಲಿ ತಾಂತ್ರಿಕ ಕಲೆಯನ್ನು ಅಧ್ಯಯನ ಮಾಡಿದ ಮತ್ತು ಪೂಜಾ ವಿಧಿವಿಧಾನಗಳನ್ನು ಅಭ್ಯಸಿಸಿದ ಮೊದಲ ಸ್ತ್ರೀ. ತಂದೆ ಪದ್ಮನಾಭನ್, ಅರ್ಚಕರು ಗುರುಗಳು. ಚಿಕ್ಕವಯಸ್ಸಿನಲ್ಲಿ ಕರ್ಮಭಾಗದÀಲ್ಲಿ ಆಸಕ್ತಿಯಿದ್ದುದರಿಂದ ಪದ್ಮನಾಭನ್ ಪುತ್ರಿಗೆ ತಾಂತ್ರಿಕ ವಿಧಿಗಳನ್ನು ಕಲಿಸಿದರು ಎಂದು ಜ್ಯೋತ್ಸ್ಯಾ ಹೇಳಿದ್ದಾರೆ. ತಾಂತ್ರಿಕ ಭಾಗ ಅಧ್ಯಯನದ ಮೂಲಕ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಲಿಂಗ ವ್ಯತ್ಯಾಸಗಳಿಗೆ ಇತಿಶ್ರೀ ಹಾಡಲಿರುವ ದೊಡ್ಡ ಹೆಜ್ಜೆಯೆಂದೇ ಹೇಳಲಾಗಿದೆ.
2010ರಲ್ಲಿ ಮೊದಲ ಪೂಜೆ ನಡೆಸಿದ್ದರು. ನಂತರ ಜ್ಯೋತ್ಸಾ ಅವರಿಗೆ ತಂದೆಯವರೊಂದಿಗೆ ತಾಯಿ ಅರ್ಚನಾ ಕೂಡ ಬೆಂಬಲವಾದರು. ಜ್ಯೋತ್ಸಾ ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 11 ವರ್ಷಗಳ ಹಿಂದೆ, ಕತ್ತೂರಿನ ಪೈಂಕನ್ನಿಕಾವ್‍ನ ಭದ್ರಕಾಳಿ ದೇವಸ್ಥಾನದಲ್ಲಿ ಮೂಲಬಿಂಬ ಪ್ರತಿಷ್ಠೆ ನಡೆದಾಗಲೂ ಜ್ಯೋತ್ಸಾ ತನ್ನ ತಂದೆಯೊಂದಿಗೆ ಪೂಜಾ ವಿಧಿಗಳಲ್ಲಿ ಸಕ್ರಿಯಳಾಗಿದ್ದಳು. ಜ್ಯೋತ್ಸಾ ಆಗ 7ನೇ ತರಗತಿ ವಿದ್ಯಾರ್ಥಿನಿ. ದೇವಸ್ಥಾನದ ಅಂಗಳದಲ್ಲಿ ಆಟವಾಡುತ್ತಾ ಬೆಳೆದ ಬಾಲಕಿ ಅದೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಮುನ್ನಡೆಸುತ್ತಿರುವುದು ಈ ಕುಟುಂಬಕ್ಕೆ ಸಂತಸ ಹಾಗೂ ಹೆಮ್ಮೆ ತಂದಿದೆ.
ಪೈಂಕನ್ನಿಕಾವ್ ದೇವಸ್ಥಾನದ ತಂತ್ರಿ ತರಣನೆಲ್ಲೂರು ಪದ್ಮನಾಭನ್ ನಂಬೂದಿರಿ ಮತ್ತು ಅರ್ಚನಾ ಅಂತರ್ಜನಂ ಅವರ ಇಬ್ಬರು ಮಕ್ಕಳಲ್ಲಿ ಜ್ಯೋತ್ಸಾ ಹಿರಿಯಳು. ಸಹೋದರ ಶ್ರೀಶಂಕರನ್ ತಂತ್ರಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಕೇರಳದ ತಾಂತ್ರಿಕ ಚಾರ್ಯರಲ್ಲಿ ವಿಶಿಷ್ಟವಾದ ತ್ರಿಪ್ರಯಾರ್ ಅವರು ಶ್ರೀರಾಮ ದೇವಸ್ಥಾನದ ತಂತ್ರಿ ಪದ್ಮನಾಭನ್ ನಂಬೂದಿರಿಪಾಡ್ ಅವರ ಸೋದರಳಿಯರಾಗಿದ್ದಾರೆ.