ಕಾಸರಗೋಡು: ಕಾಞಂಗಾಡು ನಗರಸಭೆಯು 2022-23ರ ಜನಪರ ವಾರ್ಷಿಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪೀಠೋಪಕರಣ ಮತ್ತು ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಯಿತು. ಕಾಞಂಗಾಡ್ ವ್ಯಾಪಾರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ ಉದ್ಘಾಟಿಸಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ಅಹಮದಾಲಿ ಅಧ್ಯಕ್ಷತೆ ವಹಿಸಿದ್ದರು. ನಂತರ ಜಾತಿ ಅಭಿವೃದ್ಧಿ ಇಲಾಖೆಯ ವಿಜಯೋತ್ಸವ-2023 ಹಾಗೂ ಮಾದಕ ವಸ್ತು ವಇರುದ್ಧ ಕಾಯಾಗಾರ ನಡೆಯಿತು.
ಈ ಸಂದರ್ಭಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಯಿತು. ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಲತಾ ಉಪಸ್ಥಿತರಿದ್ದರು. ಪರಿಶಿಷ್ಟ ಜಾತಿ ಯೋಜನಾ ಅಭಿವೃದ್ಧಿ ಅಧಿಕಾರಿ ಪಿ.ಮಿನಿ ಸ್ವಾಗತಿಸಿದರು. ಜಾತಿ ಅಭಿವೃದ್ಧಿ ಕಛೇರಿಯ ಮುಖ್ಯ ಗುಮಾಸ್ತ ಕೆ.ದೀಪಕ್ ವಂದಿಸಿದರು.