ರೇಷ್ಮೆ ಸೀರೆ ಉಡಲು ತುಂಬಾ ಇಷ್ಟವಾಗುವುದು, ಉಟ್ಟಾಗ ಲಕ್ಷ್ಮಿಯಂತೆ ಕಂಗೊಳಿಸುತ್ತೇವೆ. ಇತರ ಸೀರೆಗಿಂತ ರೇಷ್ಮೆ ಸೀರೆ ಉಟ್ಟರೆ ಮುಖದಲ್ಲಿ ಅದೇನೋ ಕಳೆ. ಅದರಲ್ಲೂ ಶುಭ ಕಾರ್ಯದಲ್ಲಿ ರೇಷ್ಮೆ ಸೀರೆ ಉಟ್ಟುಕೊಂಡರೆ ಶುಭ ಎಂದು ಹೇಳಲಾಗುವುದು. ಆದ್ದರಿಂದ ಪೂಜಾ ಕಾರ್ಯಗಳಲ್ಲಿ, ಮದುವೆಯಲ್ಲಿ ರೇಷ್ಮೆ ಸೀರೆಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗಿದೆ.
ಆದರೆ ರೇಷ್ಮೆ ಸೀರೆ ಎಷ್ಟು ಚೆಂದನೋ ಅದರ ನಿರ್ವಹಣೆ ಕೂಡ ಕಷ್ಟದ ಕೆಲಸ. ತುಂಬಾ ಜನ ಡ್ರೈ ಕ್ಲೀನ್‌ಗೆ ಕೊಟ್ಟು ಕ್ಲೀನ್ ಮಾಡಿಸುತ್ತಾರೆ, ಮನೆಯಲ್ಲಿ ಒಗೆದರೆ ಅಷ್ಟು ದುಬಾರಿ ಸೀರೆ ಎಲ್ಲಿ ಹಾಳಾಗುತ್ತದೆ ಎಂಬ ಅಂಜಿಕೆ, ಅಲ್ಲದೆ ಅದರ ಬಾರ್ಡರ್ ಕಲರ್ ಸೀರೆಗೆ ಅಂಟುವುದು ಈ ರೀತಿಯ ಅವಾಂತರ ಉಂಟಾಗುವುದು, ಹಾಗಾಗಿ ಈ ರಿಸ್ಕ್ ತೆಗೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ ನಿಮಗೆ ರೇಷ್ಮೆ ಸೀರೆ ಒಗೆಯುವ ಟ್ರಿಕ್ಸ್ ಗೊತ್ತಾದರೆ ನೀವೇ ತೊಳೆಯಬಹುದು:
ಸ್ಟೆಪ್ 1: ದೊಡ್ಡ ಬಕೆಟ್‌ನಲ್ಲಿ ತಣ್ಣೀರು ತುಂಬಿ ಅದರಲ್ಲಿ ಸೀರೆಯನ್ನು ಹಾಕಿ, ಸೀರೆ ಹಾಕುವಾಗ ಕಲರ್ ಹೋಗುವಂತಿದ್ದರೆ ಹಾಕಬೇಡಿ (ರೇಷ್ಮೆ ಸೀರೆ ಕಲರ್ ಬಿಡುವುದಿಲ್ಲ, ಆದರೂ ಕೆಲವೊಂದು ಸೀರೆಯ ಬಣ್ಣ ಸ್ವಲ್ಪ ಹೋಗುವುದು)
ಸ್ಟೆಪ್ 2 ಬಕೆಟ್ ನೀರಿಗೆ 2 ಚಮಚ ವಿನೆಗರ್ ಹಾಕಿ ಮಿಕ್ಸ್ ಮಾಡಿ. ನಂತರ ನಿಮ್ಮ ಸಿಲ್ಕ್/ರೇಷ್ಮೆ ಸೀರೆಯನ್ನು ಹಾಕಿ 15-20 ನಿಮಿಷ ಹಾಕಿ. ವೈಟ್ ವಿನೆಗರ್ ಹಾಕುವುದರಿಂದ ರೇಷ್ಮೆ ಸೀರೆಯ ಹೊಳಪು ಹಾಗೇ ಇರುತ್ತದೆ.
ಸ್ಟೆಪ್ 3 ಈಗ ಇನ್ನೊಂದು ಬಕೆಟ್‌ನಲ್ಲಿ ಮೈಲ್ಡ್ ಡಿಟರ್ಜೆಂಟ್ ಹಾಕಿ. ಅದರಲ್ಲೂ ಲಿಕ್ವಿಡ್ ಬಳಸಿ. anti-color fading ಡಿಟರ್ಜೆಂಟ್ ಬಳಸಿ.
ಸ್ಟೆಪ್ 4 ಈಗ ಡಿಟರ್ಜೆಂಟ್ ಹಾಕಿರುವ ಬಕೆಟ್‌ಗೆ ಸೀರೆ ಹಾಕಿ ಮೆಲ್ಲನೆ ಕೈಯಲ್ಲಿಯೇ ತೊಳೆಯಿರಿ.
ಸ್ಟೆಪ್ 5 ನಂತರ ಸೀರೆಯನ್ನು ಹಿಂಡಬೇಡಿ. ಹಾಗೇ ನೀರು ಹೋಗಲು ಇಟ್ಟು ನಂತರ ಒಣಹಾಕಿ.
ಸ್ಟೆಪ್ 6 ಸೀರೆಯನ್ನು ಒಣಗಲು ಹಾಕುವಾಗ ಎಲ್ಲಿಯೂ ಮಡಚಿರಬಾರದು. ಒಂದು ವೇಳೆ ಕಲೆಯಿದ್ದರೆ ಏನು ಮಾಡಬೇಕು?
ನಿಂಬೆಹಣ್ಣು ಅಥವಾ ವಿನೆಗರ್ ಸಲ್ಯೂಷನ್ ಬಳಸಿ ತೆಗೆಯಬಹುದು.ಸ ಸೀರೆಯನ್ನು ತೊಳೆಯುವ ಮುನ್ನ ಅದರ ಲೇಬಲ್ ಚೆಕ್ ಮಾಡಿ.