ಮುಂಬೈ: ಮಳೆಯಿಂದಾಗಿ ವಾಹನಗಳು ರಸ್ತೆಯಲ್ಲಿ ಜಾರಿ ಬೀಳುವುದನ್ನು ನೋಡಿದ ಟ್ರಾಫಿಕ್ ಪೊಲೀಸ್, ರಸ್ತೆಯಲ್ಲಿ ಮರಳನ್ನು ಹರಡಲು ಪ್ರಾರಂಭಿಸಿದರು. ಈ ತ್ವರಿತ ಕ್ರಮವು ಅನೇಕ ಜನರಿಗೆ ಸಹಾಯ ಮಾಡಿದೆ. ಈ ಮೂಲಕ ಅವರು ಜನರ ಮೆಚ್ಚುಗೆಗೆ ಪಾತ್ರರಾದರು.
ಮುಂಬೈ: ಮಳೆಯಿಂದಾಗಿ ವಾಹನಗಳು ರಸ್ತೆಯಲ್ಲಿ ಜಾರಿ ಬೀಳುವುದನ್ನು ನೋಡಿದ ಟ್ರಾಫಿಕ್ ಪೊಲೀಸ್, ರಸ್ತೆಯಲ್ಲಿ ಮರಳನ್ನು ಹರಡಲು ಪ್ರಾರಂಭಿಸಿದರು. ಈ ತ್ವರಿತ ಕ್ರಮವು ಅನೇಕ ಜನರಿಗೆ ಸಹಾಯ ಮಾಡಿದೆ. ಈ ಮೂಲಕ ಅವರು ಜನರ ಮೆಚ್ಚುಗೆಗೆ ಪಾತ್ರರಾದರು.
ಕಳೆದ ಒಂದು ವಾರದಲ್ಲಿ, ಭಾರತದ ಹಲವಾರು ರಾಜ್ಯಗಳು ವರ್ಷದ ಅತ್ಯಂತ ಬಿಸಿಯಾದ ತಿಂಗಳಲ್ಲಿ ಶೀತ ಗಾಳಿ ಮತ್ತು ಮಳೆಯನ್ನು ಕಂಡಿವೆ. ಹವಾಮಾನದಲ್ಲಿನ ಈ ಬದಲಾವಣೆಯಿಂದಾಗಿ, ಅನೇಕ ಜನರು ಶಾಲೆ, ಕಾಲೇಜು, ಕೆಲಸ ಮತ್ತು ಇತರ ಸ್ಥಳಗಳಿಗೆ ಪ್ರಯಾಣಿಸಲು ತೊಂದರೆಗಳನ್ನು ಅನುಭವಿಸಿದರು. ಹಲವರು ದೀರ್ಘ ಸಂಚಾರವನ್ನು ಎದುರಿಸಬೇಕಾಯಿತು. ಅನೇಕ ವಾಹನಗಳು ರಸ್ತೆಗಳಲ್ಲಿ ಜಾರುವ ತೊಂದರೆ ಅನುಭವಿಸಿದವು. ಇದನ್ನು ಕಂಡ ಮುಂಬೈನ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಕ್ಷಣವೇ ಆ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸಿದರು.
ಅವರು ಸಮಯೋಚಿತವಾಗಿ ರಸ್ತೆ ಮೇಲೆ ಮರಳನ್ನು ಹರಡಲು ಪ್ರಾರಂಭಿಸಿದರು. ಈ ಬಗ್ಗೆ ನೆಟ್ಟಿಗರೊಬ್ಬರು ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವೈಭವ್ ಪರ್ಮರ್ ಎನ್ನುವವರು ತಮ್ಮ ಟ್ವೀಟ್ ಅಲ್ಲಿ 'ಇಂದು ಭಂಡಪ್ ಪಂಪಿಂಗ್ ಸಿಗ್ನಲ್ ಬಳಿ ಅನೇಕ ದ್ವಿಚಕ್ರ ವಾಹನಗಳು ಮಳೆಯ ಕಾರಣ ಜಾರುತ್ತಿದ್ದವು. ಈ ಸಮಸ್ಯೆಗಾಗಿ ಪರಿಹಾರ ಹುಡುಕಿದ ಟ್ರಾಫಿಕ್ ಪೊಲೀಸರು ಮರಳನ್ನು ರಸ್ತೆಯ ಮೇಲೆ ಚೆಲ್ಲಿದ್ದಾರೆ. ಈ ವ್ಯಕ್ತಿಗೆ ಸೆಲ್ಯೂಟ್' ಎಂದು ಬರೆದಿದ್ದಾರೆ.
ಮುಂಬೈ: ಮಳೆಯಿಂದಾಗಿ ವಾಹನಗಳು ರಸ್ತೆಯಲ್ಲಿ ಜಾರಿ ಬೀಳುವುದನ್ನು ನೋಡಿದ ಟ್ರಾಫಿಕ್ ಪೊಲೀಸ್, ರಸ್ತೆಯಲ್ಲಿ ಮರಳನ್ನು ಹರಡಲು ಪ್ರಾರಂಭಿಸಿದರು. ಈ ತ್ವರಿತ ಕ್ರಮವು ಅನೇಕ ಜನರಿಗೆ ಸಹಾಯ ಮಾಡಿದೆ. ಈ ಮೂಲಕ ಅವರು ಜನರ ಮೆಚ್ಚುಗೆಗೆ ಪಾತ್ರರಾದರು.