ನವದೆಹಲಿ: 'ದೇಶದ ಮೊದಲ ಪ್ರಾದೇಶಿಕ ರೈಲು, ರ‍್ಯಾಪಿಡ್-ಎಕ್ಸ್‌ನಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿಗಳನ್ನು ಮೀಸಲಿಡಲಾಗುತ್ತದೆ. ಮಹಿಳೆಯರ ಸುರಕ್ಷತೆ ಹಾಗೂ ಆರಾಮದಾಯಕ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಬುಧವಾರ ಬಿಡುಗಡೆ ಮಾಡಲಾಗಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ಮಹಿಳೆಯರಿಗಾಗಿ ಮೀಸಲಿರುವ ಬೋಗಿಗಳು 72 ಆಸನ ಸಾಮರ್ಥ್ಯ ಹೊಂದಿರಲಿವೆ. ಈ ಬೋಗಿಗಳ ಕುರಿತಾದ ಮಾಹಿತಿ ಒದಗಿಸುವುದಕ್ಕಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ. ಇದರ ಜೊತೆಗೆ ಇತರೆ ಬೋಗಿಗಳಲ್ಲೂ ಮಹಿಳೆಯರಿಗೆ ಹೆಚ್ಚುವರಿಯಾಗಿ 10 ಆಸನಗಳನ್ನು ಮೀಸಲಿಡಲಾಗುತ್ತದೆ. ಮಕ್ಕಳಿಗಾಗಿ ಪ್ರತಿ ನಿಲ್ದಾಣದಲ್ಲೂ ಡಯಾಪರ್ ಬದಲಿಸುವ ಕೇಂದ್ರಗಳನ್ನು ತೆರೆಯಲಾಗುತ್ತದೆ' ಎಂದು ಹೇಳಲಾಗಿದೆ.