ಕಾಸರಗೋಡು: ಕೋಟ್ಟಯಂನಲ್ಲಿ ಹತ್ಯೆಗೀಡದ ಯುವ ವೈದ್ಯೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾಜಾರ್ಜ್ ರಾಜ್ಯದ ವೈದ್ಯಕೀಯ ವಲಯವನ್ನು ಅಪಮಾನಿÂಸಿರುವುದಾಗಿ ಕೆಎಸ್‍ಯು ಜಿಲ್ಲಾ ಸಮಿತಿ ಅಧ್ಯಕ್ಷ ಜಾವೇದ್ ಪುತ್ತೂರು ತಿಳಿಸಿದ್ದಾರೆ. ಅವರು ವೈದ್ಯೆ ಹತ್ಯೆ ಖಂಡಿಸಿ ಕಾಸರಗೋಡು ಜನರಲ್ ಆಸ್ಪತ್ರೆ ಎದುರು ಕೆಎಸ್‍ಯು ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.
ಹತ್ಯೆಗೀಡಾದ ವೈದ್ಯಕೀಯ ವಿದ್ಯಾರ್ಥಿ ದಾಳಿ ತಡೆಗಟ್ಟುವ ಅನುಭವ ಹೊಂದಿಲ್ಲ ಎಂಬುದಾಗಿ ಆರೋಗ್ಯ ಸಚಿವೆ ಹೇಳಿಕೆ ನೀಡಿದ್ದು, ಇದು ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿದರು.
ಪೆÇಲೀಸರ ಉಪಸ್ಥಿತಿಯಲ್ಲೇ ನಡೆದಿರುವ ಈ ಕೊಲೆಯ ಸಂಪೂರ್ಣ ಹೊಣೆಗಾರಿಕೆ ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಹೊರಬೇಕಾಗಿದೆ. ಕೇರಳದಲ್ಲಿ ನಡೆಯುತ್ತಿರುವ ಈ ರೀತಿಯ ವಿದ್ಯಮಾನದಿಂದ ದೇಶ ತಲೆತಗ್ಗಿಸುವಂತಾಗಿದೆ ಎಂದು ತಿಳಿಸಿದರು. ನುಹುಮಾನ್ ಪಳ್ಳಂಗೋಡ್, ಅಭಿಮನ್ಯು, ಶ್ರೀರಾಜ್ ಮಾಙËಡ್, ಅಖಿಲ್ ಕಾಳಿಚ್ಚನಡ್ಕ, ವಿಷ್ಣು ಇರಿಯಣ್ಣಿ ಉಪಸ್ಥಿತರಿದ್ದರು. ಶಬರಿನಾಥ್ ಸ್ವಾಗತಿಸಿದರು. ಜೆರೆಮಿಯಾ ವಂದಿಸಿದರು.