ಭೋಪಾಲ್: ತಮ್ಮ ತಾಯಿ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಪುಟ್ಟ ಬಾಲಕಿಯರಿಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಭೋಪಾಲ್: ತಮ್ಮ ತಾಯಿ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಪುಟ್ಟ ಬಾಲಕಿಯರಿಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಪೊಲೀಸರು ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದ ವೇಳೆ ಠಾಣೆಗೆ ಬಂದ ಪುಟ್ಟ ಬಾಲಕಿಯರು ತಮ್ಮ ತಂದೆಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಿತರ್‌ವಾರ್ ಪೊಲೀಸ್ ಠಾಣೆಗೆ ಆಗಮಿಸಿದ ಬಾಲಕಿಯರು ತಮ್ಮ ತಾಯಿ ಮೇಲೆ ತಂದೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಮನೆಯಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಠಾಣಾಧಿಕಾರಿ ಪ್ರದೀಪ್ ಶರ್ಮಾ ಅವರಿಗೆ ವಿವರಿಸಿದ್ದಾರೆ.
ಬುದ್ದಿವಾದ ಹೇಳಿದ ಪೊಲೀಸರು
ಮಕ್ಕಳ ಬಳಿ ಅಹವಾಲು ಆಲಿಸಿದ ಬಳಿಕ ಅವರ ಮನೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಪೋಷಕರಿಗೆ ಬುದ್ದಿವಾದ ಹೇಳಿದ್ದಾರೆ. ಈ ರೀತಿ ಜಗಳವಾಡುವುದರಿಧಂ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ದಂಪತಿಗಳಿಗೆ ಮನವರಿಕೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಿತರ್‌ವಾರ್ ಠಾಣಾಧಿಕಾರಿ ಪ್ರದೀಪ್ ಶರ್ಮಾ ತಮ್ಮ ತಾಯಿ ಮೇಲೆ ತಂದೆ ಹಲ್ಲೆ ನಡೆಸುತ್ತಾರೆ ಎಂದು ದುರು ನೀಡಲು ಇಬ್ಬರು ಬಾಲಕಿಯರು ಠಾಣೆಗೆ ಆಗಮಿಸಿದ್ದರು. ಅವರ ಕಥೆಯನ್ನು ಕೇಳಿ ನಂತರ ಅವರ ಮನೆಗೆ ಹೋಗಿ ಪೋಷಕರನ್ನು ಭೇಟಿ ಮಾಡಿ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದಾದ್ದರಿಂದ ತಮ್ಮ ತಮ್ಮಲ್ಲೇ ಜಗಳವಾಡಬೇಡಿ ಎಂದು ಬುದ್ದಿವಾದ ಹೇಳಿರುವುದಾಗಿ ತಿಳಿಸಿದ್ದಾರೆ.