ನವದೆಹಲಿ: ಆಮ್ ಆದ್ಮಿ ಪಾರ್ಟಿಯು (ಎಎಪಿ) ತನ್ನ ಗೋವಾ ರಾಜ್ಯ ಘಟಕದ ಸಂಘಟನೆಯನ್ನು ವಿಸರ್ಜಿಸಿದೆ.
ಪ್ರಸ್ತುತ ಎಎಪಿ ಗೋವಾ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಅಮಿತ್ ಪಾಲೇಕರ್ ಆ ಸ್ಥಾನದಲ್ಲಿ ಮಾತ್ರ ಮುಂದುವರೆಯಲಿದ್ದು, ಉಳಿದ ಸಂಘಟನಾ ಹುದ್ದೆಗಳನ್ನು ಶೀಘ್ರವೇ ಪುನರ್ ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ಎಎಪಿಯ ಈ ದಿಢೀರ್ ನಡೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಇತ್ತೀಚೆಗೆ ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ ಗೋವಾ ರಾಜ್ಯದ ಹೆಸರು ಕೂಡ ತಳಕು ಹಾಕಿಕೊಂಡಿತ್ತು. ಅಲ್ಲದೇ ಇತ್ತೀಚೆಗಷ್ಟೇ ಎಎಪಿಗೆ ಕೇಂದ್ರ ಚುನಾವಣಾ ಆಯೋಗ ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿತ್ತು.