ಕುಂಬಳೆ: ಕುಂಬಳೆ ಗ್ರಾಮ ಪಂಚಾಯಿತಿಯು 2022-23ನೇ ಸಾಲಿನ ವಾರ್ಷಿಕ ಯೋಜನೆಯಲ್ಲಿ ಸೇರ್ಪಡೆಗೊಳಿಸಿರುವ ವಿಶೇಷ ಚೇತನÀಲರಿಗೆ ಕೊಡಮಾಡುವ ಸಲಕರಣೆಗಳನ್ನು ವಿತರಿಸಲಾಯಿತು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಉದ್ಘಾಟಿಸಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ.ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷÀ ಸಬೂರ, ಆಯೇಷತ್ ನೆಸೀಮ, ಪಂಚಾಯಿತಿ ಸದಸ್ಯರಾದ ಕೌಲತ್ ಬೀಬಿ, ಅನ್ವರ್ ಹುಸೇನ್, ವಿವೇಕ್, ಅಜಯ್, ರವಿರಾಜ್ ಉಪಸ್ಥಿತರಿದ್ದರು. ಐಸಿಡಿಎಸ್ ಮೇಲ್ವಿಚಾರಕಿ ಜಿಶಾ ಸ್ವಾಗತಿಸಿ, ಪಂಚಾಯಿತಿ ಕಾರ್ಯದರ್ಶಿ ಪಿ.ಗೀತಾ ಕುಮಾರಿ ವಂದಿಸಿದರು.