ನವದೆಹಲಿ: ಭಾರತದ ಕೆಮ್ಮಿನ ಔಷಧ ಸೇವಿಸಿದ ಬಳಿಕ ಗಾಂಬಿಯಾ ಹಾಗೂ ಉಜ್ಬೇಕಿಸ್ತಾನದಲ್ಲಿ ಹಲವು ಮಕ್ಕಳು ಮೃತಪಟ್ಟ ಬೆನ್ನಲ್ಲೇ, ಇದೀಗ ರಫ್ತಾಗುವ ಕೆಮ್ಮಿನ ಔಷಧಗಳನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಜೂ. 1 ರಿಂದ ಈ ನಿಯಮ ಅನ್ವಯವಾಗಲಿದೆ ಎಂದು ಆರೋಗ್ಯ ಸಚಿವಾಲಯದ ಆದೇಶದಲ್ಲಿ ಹೇಳಲಾಗಿದೆ. ರಫ್ತು ಮಾಡುವುದಕ್ಕೂ ಮುನ್ನ ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ ಪ್ರಮಾಣಪತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ.
'ರಫ್ತು ಮಾಡುವ ಮಾದರಿಯನ್ನು ಪರೀಕ್ಷೆ ಮಾಡಿ, ಉತ್ಪಾದನೆ ವಿಶ್ಲೇಷಣೆಯ ಪ್ರಮಾಣಪತ್ರ ಪಡೆದು ಕೆಮ್ಮಿನ ಔಷಧ ರಫ್ತು ಮಾಡಬೇಕು' ಎಂದು ವಾಣಿಜ್ಯ ಸಚಿವಾಲಯದ ನೋಟಿಸ್‌ನಲ್ಲಿ ಹೇಳಲಾಗಿದೆ.
ಭಾರತದ ಕೆಮ್ಮಿನ ಔಷಧಗಳನ್ನು ಸೇವಿಸಿ ಗಾಂಬಿಯಾದಲ್ಲಿ 70 ಮಕ್ಕಳ ಹಾಗೂ ಉಜ್ಬೇಕಿಸ್ತಾನದಲ್ಲಿ 19 ಮಕ್ಕಳ ಸಾವಾಗಿತ್ತು. ಇದು ಭಾರತದ ಔಷಧ ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾ ಬೀರಿತ್ತು.