ಬದಿಯಡ್ಕ: ಕೊಲ್ಲಂಗಾನ ಅರ್ತಲೆ ಕಲ್ಲಕಟ್ಟ ಶ್ರೀ ರಕ್ತೇಶ್ವರೀ ನಾಗ ಗುಳಿಗ ಸೇವಾಸಮಿತಿಯ ಶ್ರೀ ರಕ್ತೇಶ್ವರಿ, ಗುಳಿಗ ಕ್ಷೇತ್ರದ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ಮಧ್ಯಾಹ್ನ 11.30ರ ಶುಭಮುಹೂರ್ತದಲ್ಲಿ ಜರಗಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಿಲಾನ್ಯಾಸ ನೆರವೇರಿಸಿ ಅನುಗ್ರಹಿಸಿದರು. ವೇದಮೂರ್ತಿ ಗಣೇಶ್ ಭಟ್ ಮುಂಡೋಡು ತಾಂತ್ರಿಕ ವಿಧಿಗಳನ್ನು ನೆರವೇರಿಸಿದರು. ವಾಸ್ತುಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ ಉಪಸ್ಥಿತರಿದ್ದರು. ಊರಪರವೂರ ಗಣ್ಯರು, ಸೇವಾಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶ್ರೀಗಳು ವಿನಂತಿ ಪತ್ರ ಬಿಡುಗಡೆಗೊಳಿಸಿ, ನಿಧಿ ಸಮರ್ಪಣಾ ಕಾರ್ಯಗಳಿಗೆ ಚಾಲನೆಯನ್ನು ನೀಡಿ ಆಶೀರ್ವದಿಸಿದರು.