ಮಲಪ್ಪುರಂ: ಹಿಂದೂಗಳು ತಮ್ಮ ಮಕ್ಕಳಿಗೆ ಸನಾತನ ಧರ್ಮವನ್ನು ಕಲಿಸಬೇಕು ಎಂದು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಲ್ಫತ್ ಹೇಳಿರುವÀರು.
ಹಿಂದೂಗಳು ತಮ್ಮ ಜನನಿಬಿಡ ಪ್ರದೇಶಗಳಲ್ಲಿ ಸಣ್ಣ ಶೆಡ್‍ಗಳನ್ನು ನಿರ್ಮಿಸಿ ಅಲ್ಲಿನ ಮಕ್ಕಳಿಗೆ ಹಿಂದೂ ಧರ್ಮವನ್ನು ಕಲಿಸಬೇಕು. 5 ರಿಂದ 18 ವರ್ಷ ವಯಸ್ಸಿನವರಿಗೆ ಕಲಿಸಬೇಕು. ಹಾಗಾದಾಗ ಮಾತ್ರ ಹಿಂದೂ ಹುಡುಗಿಯರು ಮುಸ್ಲಿಂ ಯುವಕರ ಜೊತೆ ಓಡಿ ಹೋಗುವ ಪರಿಸ್ಥಿತಿ ನಿರ್ಮೂಲನೆ ಸಾಧ್ಯ ಎನ್ನುತ್ತಾರೆ ಸುಲ್ಫತ್.
ತಮ್ಮೊಂದಿಗೆ ಬಂದ ಹಿಂದೂ ಹುಡುಗಿಯರನ್ನು ಮುಸ್ಲಿಮರು ಎಂದಿಗೂ ವಾಪಸ್ ಕಳುಹಿಸುವುದಿಲ್ಲ. ನಂತರ ಹುಡುಗಿಯರು ಹಿಂದೂ ಪ್ರಾರ್ಥನೆಗಳನ್ನು ಓದುವುದು ಅವರಿಗೆ ಇಷ್ಟವಾಗದ ಕಾರಣ ಅವರು ಹುಡುಗಿಯರನ್ನು ವಾಪಸ್ ಕಳುಹಿಸಲಿಲ್ಲ. ಮಗಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಿದ ಹಾದಿಯಾಳ ಪೋಷಕರ ಸ್ಥಿತಿ ಎಷ್ಟು ದಯನೀಯವಾಗಿದೆ ಎಂದು ನೆನಪಿಸಿದರು.
ಮಲಪ್ಪುರಂನಲ್ಲಿ ತಂದೆ-ತಾಯಿ ಬೆಳೆಸಿದ 16 ವರ್ಷದ ಬಾಲಕಿಯೊಬ್ಬಳು ಮುಸ್ಲಿಂನೊಂದಿಗೆ ಓಡಿ ಹೋಗಿದ್ದಾಳೆ. ಇಂತಹ ಘಟನೆಗಳು ಮರುಕಳಿಸದಂತೆ ಹಿಂದೂಗಳು ತಮ್ಮ ಮಕ್ಕಳಿಗೆ ತಮ್ಮದೇ ಧರ್ಮ ಮತ್ತು ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸುಲ್ಫತ್ ಹೇಳುತ್ತಾರೆ.