ಕೊಟ್ಟಾಯಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಷಣದ ವೇಳೆ ಅವರ ಮೈಕ್ ಹಾನಿಗೊಳಗಾಗಿ ಸಮಸ್ಯೆ ಸೃಷ್ಟಿಸಿದ ಘಟನೆ ನಡೆದಿದೆ. ಕೊಟ್ಟಾಯಂ ಜಿಲ್ಲಾ ಯೋಜನಾ ಸಮಿತಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.
ತಾಂತ್ರಿಕ ದೋಷದಿಂದ ಮಾತನಾಡುವಾಗ ಮೂರು ಬಾರಿ ಧ್ವನಿ ಕೇಳಿ ಮೈಕ್ ಸಂಪೂರ್ಣ ಕೆಟ್ಟುನಿಂತಿತು.
ಮೈಕ್ ಹಾನಿಗೊಂಡ ಬಳಿಕ ಮೈಕ್ ಆಪರೇಟರ್ ಎರಡು ಮೈಕ್ ತಂದು ಸ್ಟ್ಯಾಂಡ್ ನಲ್ಲಿ ಸರಿಪಡಿಸಿದರೂ ಅದೂ ಫಲನೀಡಲಿಲ್ಲ. ನಂತರ ಭಾಷಣ ಮುಂದುವರಿಸಲು ಆಯೋಜಕರು ಮೈಕ್ ಕೊಟ್ಟರೂ ಅದನ್ನು ಸ್ವೀಕರಿಸಲು ಮುಖ್ಯಮಂತ್ರಿ ನಿರಾಕರಿಸಿದರು. ಸಿಎಂ ಆಯೋಜಕರತ್ತ ಕಣ್ಣು ಹಾಯಿಸಿದ ನಂತರ ಮೈಕ್ ಸ್ಟ್ಯಾಂಡ್ ಭದ್ರಪಡಿಸಿ ಆಯೋಜಕರು ವೇದಿಕೆಯಿಂದ ನಿರ್ಗಮಿಸಿದರು. ಬಳಿಕ ಮುಖ್ಯಮಂತ್ರಿಗಳು ತಮ್ಮ ಭಾಷಣವನ್ನು ಮುಂದುವರಿಸಿದರು.
ಆದರೆ, ಮೈಕ್ ಹಾಳಾದ ಬಗ್ಗೆ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಪ್ರತಿಕ್ರಿಯಿಸಲಿಲ್ಲ. ಇದಕ್ಕೂ ಮುನ್ನ ತ್ರಿಶೂರಿನ ಮಾಲಾದಲ್ಲಿ ಸಿಪಿಎಂ ನೇತೃತ್ವದ ಜನ ರಕ್ಷಣಾ ಯಾತ್ರೆಗೆ ನೀಡಿದ ಸ್ವಾಗತ ಸಂದರ್ಭದಲ್ಲಿ ಮೈಕ್ ಹಾನಿಗೊಂಡಿತ್ತು. ಆಗ ದುರಸ್ತಿ ಮಾಡಲು ಬಂದ ಆಯೋಜಕರನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಬೈದಿದ್ದು ಸುದ್ದಿಯಾಗಿತ್ತು.