ಪತ್ತನಂತಿಟ್ಟ: ಸಿಪಿಎಂ ಪತ್ತನಂತಿಟ್ಟ ಪ್ರದೇಶ ಕಾರ್ಯದರ್ಶಿ ಪಿ.ಆರ್.ಪ್ರದೀಪ್ (46) ಅವರು ಇಲ್ಲಿಗೆ ಸಮೀಪದ ಎಳಂತೂರಿನ ಪಕ್ಷದ ಶಾಖಾ ಸಮಿತಿ ಕಚೇರಿಯಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಎಲ್ಲರೊಂದಿಗೆ ಸಂಪರ್ಕದಲ್ಲಿದ್ದ ಅವರು ಮಧ್ಯಾಹ್ನದ ವೇಳೆಗೆ ನಾಪತ್ತೆಯಾಗಿದ್ದರು. ತದನಂತರ ಸಂಜೆ 5 ಗಂಟೆಯ ಸುಮಾರಿಗೆ ಸಿಪಿಎಂ ನಾಯಕ ಅವರ ಮನೆಯ ಸಮೀಪದಲ್ಲಿರುವ ಪಕ್ಷದ ವಲಿಯವಟ್ಟಂ ಬ್ರಾಂಚ್ ಕಮಿಟಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬ್ರಾಂಚ್ ಕಮಿಟಿಯ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತನ ಸ್ನೇಹಿತರು ತಿಳಿಸಿದ್ದಾರೆ. ಅವರು ಆತ್ಮಹತ್ಯೆಗೈಯ್ಯಲು ಕಾರಣ ತಿಳಿದಿಲ್ಲ ಎಂದು ಅವರು ಹೇಳಿದರು. ಅರನ್ಮುಳ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಅವರ ಮೃತದೇಹವನ್ನು ಪತ್ತನಂತಿಟ್ಟ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಎಳಂತೂರು ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರು ಮತ್ತು ಕೇರಳ ರೈತ ಸಂಘದ ರಾಜ್ಯ ಸಮಿತಿ ಸದಸ್ಯರಾಗಿದ್ದರು. ಮಾಜಿ ಎಳಂತೂರು ಬ್ಲಾಕ್ ಪಂಚಾಯತ್ ಸದಸ್ಯ ಹಾಗೂ ಡಿವೈಎಫ್‍ಐ ಪತ್ತನಂತಿಟ್ಟ ಜಿಲ್ಲಾ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯೂ ಆಗಿದ್ದರು. ಎಸ್‍ಎಫ್‍ಐ ಜಿಲ್ಲಾ ಜಂಟಿ ಕಾರ್ಯದರ್ಶಿಯೂ ಆಗಿದ್ದರು. ಪತ್ನಿ ಶ್ರುತಿ ಉನ್ನತ ಹುದ್ದೆಯಲ್ಲಿದ್ದಾರೆ. ದಂಪತಿಗಳಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ, ”ಎಂದು ಅವರ ಸ್ನೇಹಿತರೊಬ್ಬರು ಹೇಳಿದರು.
ಆತ್ಮಹತ್ಯೆ ಮಾಡಿಕೊಳ್ಳಲು ಆರ್ಥಿಕ ಸಮಸ್ಯೆಯೇ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ ಎಂದು ಅರನ್ಮುಲಾ ಪೊಲೀಸರು ತಿಳಿಸಿದ್ದಾರೆ.
(Å ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿದ್ದರೆ ಅಥವಾ ಸ್ನೇಹಿತರ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಆಲಿಸಲು, ಸಲಹೆ ನೀಡಲು ಸ್ನೇಹ ಫೌಂಡೇಶನ್ ನಿಮ್ಮ ಜೊತೆ ಸದಾ ಇರಲಿದೆ- 04424640050 (24*7 ಲಭ್ಯವಿದೆ)