ಚೆನ್ನೈ: ಎದುರಿಗಿರುವವರು ನಗ್ನವಾಗಿ ಕಾಣುವ ಕನ್ನಡಕ ಬಗ್ಗೆ ಕೆಲವು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಈ ಕನ್ನಡವನ್ನು ಮಾರಾಟಕ್ಕೆ ಇಳಿದ ಕೆಲವು ಖದೀಮರು ಪೊಲೀಸರ ಬಲೆಗೆ ಬಿದ್ದಾರೆ.
ಚೆನ್ನೈ: ಎದುರಿಗಿರುವವರು ನಗ್ನವಾಗಿ ಕಾಣುವ ಕನ್ನಡಕ ಬಗ್ಗೆ ಕೆಲವು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಈ ಕನ್ನಡವನ್ನು ಮಾರಾಟಕ್ಕೆ ಇಳಿದ ಕೆಲವು ಖದೀಮರು ಪೊಲೀಸರ ಬಲೆಗೆ ಬಿದ್ದಾರೆ.
ಶಿವ ಅಲಿಯಾಸ್ ಸೂರ್ಯ (39), ಕುಗೈಪ್ (37), ಜಿತು (24) ಮತ್ತು ಇರ್ಷಾದ್ (21) ಬಂಧಿತ ಆರೋಪಿಗಳು.
ಈ ನಾಲ್ವರು ನಕಲಿ ಕನ್ನಡಕದಿಂದ ಎದುರಿಗಿರುವವರು ನಗ್ನವಾಗಿ ಕಾಣುತ್ತಾರೆ ಎಂದು ನಂಬಿಸಿ ದೊಡ್ಡ ಮೊತ್ತದ ಹಣಕ್ಕೆ ಮಾರಾಟ ಮಾಡಲು ಯತ್ನಿಸಿದ್ದಾರೆ. ದುಬಾರಿ ಹಣ ಕೊಟ್ಟು ಕನ್ನಡಕ ಖರೀದಿಸಿದ ಜನರು ಎದುರಿಗಿರುವವರು ನಗ್ನವಾಗಿ ಕಾಣದಿರುವುದನ್ನು ಪ್ರಶ್ನಿಸಿದರೆ ನಕಲಿ ಪಿಸ್ತೂಲ್‌ನಿಂದ ಬೆದರಿಸಿ ಹಣವನ್ನೂ ದೋಚಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಎಮ್‌ಬಿಟಿ ಪೊಲೀಸರು ಕೋಯಂಬೇಡು ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಇನ್ನು ಈ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.