ಉಪ್ಪಳ: ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ ಯೋಜನೆಯ ಅಂಗವಾಗಿ ಬಾಯಾರು ಕ್ಯಾಂಪೆÇ್ಕೀ ಶಾಖೆಯ ಸಕ್ರಿಯ ಸದಸ್ಯ ಅಬ್ದುಲ್ ರಹಿಮಾನ್ ಅವರ ಪತ್ನಿ ಅಪಾಸತ್ ರಜಿಯಾ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆಗಾಗಿ ರೂ. ಮೂರು ಲಕ್ಷದ ಚೆಕ್ ನ್ನು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ. ಹಸ್ತಾಂತರಿಸಿದರು. ಕ್ಯಾಂಪ್ಕೋ ನಿರ್ದೇಶಕರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಬಾಲಕೃಷ್ಣ ರೈ ಬಾನೊಟ್ಟು, ಕ್ಯಾಂಪ್ಕೋ ಹಿರಿಯ ಪ್ರಬಂಧಕ ಗಿರೀಶ್ ಇ., ಕ್ಯಾಂಪೆÇ್ಕೀ ಬಾಯಾರು ಶಾಖೆಯ ಪ್ರಬಂಧಕ ರಮೇಶ್ ವೈ. ಉಪಸ್ಥಿತರಿದ್ದರು.