HEALTH TIPS

ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ರಾಜ್ಯ ಸಮ್ಮೇಳನ ಕೊಟ್ಟಾರಕ್ಕರದಲ್ಲಿ

                    ಕೊಟ್ಟಾರಕ್ಕರ: ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ 57ನೇ ರಾಜ್ಯ ಸಮ್ಮೇಳನ ಮೇ.26, 27 ಮತ್ತು 28ರಂದು ಕೊಟ್ಟಾರಕ್ಕರ ಸೌಪರ್ಣಿಕಾ ಸಭಾಂಗಣದಲ್ಲಿ (ಕೇಳಪ್ಪಾಜಿ ನಗರ) ನಡೆಯಲಿದೆ.

            26ನೇ ರಾಜ್ಯ ಸಮಿತಿ ಸಭೆ ಬೆಳಗ್ಗೆ 10ಕ್ಕೆ ಕಿಷ್ಕೇಕರ ಎನ್ ಎಸ್ ಎಸ್ ಕಾರ್ಯಯೋಗ ಮಂದಿರದಲ್ಲಿ ನಡೆಯಲಿದೆ. 27ರಂದು ಬೆಳಗ್ಗೆ 8.30ಕ್ಕೆ ಶಿವ ಸಹಸ್ರನಾಮ, ತಿರುವಾದಿರಕಳಿ ನಡೆಯಲಿದೆ. 10ರಂದು ಮಾತೃಶಕ್ತಿ ಸಂಗಮಕ್ಕೆ ಕವಡಿಯಾರ್ ಅರಮನೆ ಅಶ್ವತಿ ತಿರುನಾಳ್ ಗೌರಿ ಲಕ್ಷ್ಮೀಬಾಯಿ ದೀಪ ಬೆಳಗಿಸುವರು. ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸುವರು. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

           ಕೊಳತ್ತೂರು ಅದೈವತಾಶ್ರಮದ ಮಠಾಧೀಶ ಚಿದಾನಂದಪುರಿ ಸ್ವಾಮಿಗಳು ಪ್ರಧಾನ ಭಾಷಣ ಮಾಡುದರು ಮತ್ತು ಸೀಮಾಜಾಗರಣ್ ಮಂಚ್ ಅಖಿಲ ಭಾರತೀಯ ಸಂಘಟನೆಯ ಕಾರ್ಯದರ್ಶಿ ಎ. ಗೋಪಾಲಕೃಷ್ಣ ಉಪನ್ಯಾಸ ನೀಡಲಿದ್ದಾರೆ. ಕೇರಳ ಕ್ಷೇತ್ರ  ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಂ. ಮೋಹನನ್ ನಿರ್ಣಯ ಮಂಡಿಸಲಿದ್ದಾರೆ. ಮಾತೃ ಸಮಿತಿಯ ರಾಜ್ಯಾಧ್ಯಕ್ಷೆ ಕುಸುಮಮ್ ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು.

          4ರಿಂದ  ಶೋಭಾಯಾತ್ರೆ ಹಾಗೂ 5.30ಕ್ಕೆ ಭಕ್ತಜನ ಸಂಗಮವನ್ನು ಕುಮ್ಮನಂ ರಾಜಶೇಖರನ್ ಉದ್ಘಾಟಿಸುವರು. ಸಮಾರಂಭದಲ್ಲಿ ರಾಮಸಿಂಹನ್ ಪ್ರಶಸ್ತಿಯನ್ನು ಮಾಧವ್ ಜಿ ಅವರಿಗೆ ಪ್ರದಾನ ಮಾಡಲಾಗುವುದು. 

         ಕೇಂದ್ರ ಸಚಿವ ವಿ. ಮುರಳೀಧರನ್ ಉದ್ಘಾಟಿಸುವರು. ಸಮಿತಿಯ ರಾಜ್ಯಾಧ್ಯಕ್ಷ ಎಂ. ಮೋಹನನ್ ಅಧ್ಯಕ್ಷತೆ ವಹಿಸುವರು.

         ಆರ್‍ಎಸ್‍ಎಸ್ ಪ್ರಾಂತ ಸಂಘಚಾಲಕ್ ಅಡ್ವ. ಕೆ.ಕೆ. ಬಲರಾಮ್ ಉಪನ್ಯಾಸ ನೀಡಲಿದ್ದಾರೆ. 11 ರಿಂದ ಆಚಾರ್ಯ ಸಮದಾರಣಸಭೆ, 12 ರಿಂದ ನಡೆಯುವ ವಾರ್ಷಿಕ ಸಭೆಯಲ್ಲಿ ಆರ್‍ಎಸ್‍ಎಸ್ ಕ್ಷೇತ್ರೀಯ ಸಹಕಾರ್ಯವಾಹ ಎಂ. ರಾಧಾಕೃಷ್ಣನ್ ಪ್ರಧಾನ ಭಾಷಣ ಮಾಡಲಿದ್ದಾರೆ.

         ಎಂ. ಮೋಹನನ್ ಅಧ್ಯಕ್ಷತೆ ವಹಿಸುವರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ನಾರಾಯಣನ್, ಖಜಾಂಚಿ ವಿ.ಎಸ್. ರಾಮಸ್ವಾಮಿ, ಸಂಘಟನಾ ಕಾರ್ಯದರ್ಶಿ ಟಿ.ಯು. ಮೋಹನ್ ಮತ್ತಿತರರು ಮಾತನಾಡಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries