ಶ್ರೀನಗರ: ಜಮ್ಮು ಕಾಶ್ಮೀರದ ಕಿಶ್ತ್‌ವಾರ್‌ದಿಂದ ದೂರದ ದುರ್ಗಮ ಪ್ರದೇಶದ ನದಿ ದಂಡೆಯಲ್ಲಿ ಸೇನಾ ಹೆಲಿಕಾಪ್ಟರ್ ಗುರುವಾರ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ವರದಿಯಾಗಿದೆ.
ಶ್ರೀನಗರ: ಜಮ್ಮು ಕಾಶ್ಮೀರದ ಕಿಶ್ತ್‌ವಾರ್‌ದಿಂದ ದೂರದ ದುರ್ಗಮ ಪ್ರದೇಶದ ನದಿ ದಂಡೆಯಲ್ಲಿ ಸೇನಾ ಹೆಲಿಕಾಪ್ಟರ್ ಗುರುವಾರ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಹಾಗೂ ಓರ್ವ ತಾಂತ್ರಿಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
ಸ್ಥಳೀಯವಾಗಿ ನಿರ್ಮಿತ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ನಲ್ಲಿ (ಎಎಲ್‌ಎಚ್) ತಾಂತ್ರಿಕ ದೋಷ ಕಂಡುಬಂದ ಕಾರಣ ಕಿಶ್ತ್‌ವಾರ್ ಪ್ರದೇಶದಿಂದ ದೂರದ ನದಿ ದಂಡೆಯಲ್ಲಿ ಹೆಲಿಕಾಪ್ಟರ್ ಕೆಳಗಿಳಿಸಲಾಗಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲ್ಯಾಂಡಿಂಗ್‌ಗೆ ಯೋಗ್ಯವಲ್ಲದ ಪ್ರದೇಶ ಆಗಿದ್ದರಿಂದ ಬಲವಂತದ ಲ್ಯಾಂಡಿಂಗ್ ಅನಿವಾರ್ಯವೆನಿಸಿತ್ತು. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.