ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಅಖಂಡ ಏಕಾಹ ಭಜನೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮೇ 15ರಂದು ಜರುಗಲಿದೆ. ವೇದಮೂರ್ತಿ ಶುಳುವಾಲಮೂಲೆ ಶಿವಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವುದು.
15ರಂದು ಬೆಳಗ್ಗೆ ದೀಪ ಪ್ರತಿಷ್ಠೆ, ಸಾಮೂಹಿಕ ಪ್ರಾರ್ಥನೆ, ವಿವಿಧ ತಂಡಗಳಿಂದ ಭಜನೆ ನಡೆಯುವುದು. ಸಂಜೆ 5ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಳ್ಳುವುದು. ರಾತ್ರಿ 8.45ಕ್ಕೆ ಮಹಾಮಂಗಳಾರತಿ ನಡೆಯುವುದು. ಅಖಂಡ ಏಕಾಹ ಭಜನಾ ಕಾರ್ಯಕ್ರಮ ಮೇ 16ರಂದು ಬೆಳಗ್ಗೆ 6.06ಕ್ಕೆ ಸಾಮೂಹಿಕ ಭಜನೆಯೊಂದಿಗೆ ಮಹಾಮಂಗಳ ನಡೆಯುವುದು.