ಕಾಸರಗೊಡು: ಸರ್ಕಾರ ಜಾರಿಗೊಳಿಸುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಮೀನುಗಾರರಿಗೆ ಅರಿವು ಮೂಡಿಸುವುದರ ಜತೆಗೆ ಸಕಾಲಕ್ಕೆ ಮಾಹಿತಿ ಒದಗಿಸುವ ಕಾರ್ಯವನ್ನು ಅಧಿಕರಿಗಳು ನಡೆಸಬೆಕು ಎಂದು ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ಖಾತೆ ಸಚಿವ ಸಜಿ ಚೆರಿಯನ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ಕರಾವಳಿ ವಿಚಾರಣಾ ಸಭೆಯನ್ನು ಉದ್ಘಾಟಿಸಿ ಮಾತನಡಿದರು. ಕರಾವಳಿ ಕೌನ್ಸಿಲ್‍ಗಳು ಸ್ವೀಕರಿಸುವ ದೂರುಗಳನ್ನು 6 ತಿಂಗಳೊಳಗೆ ಪರಿಹರಿಸಲಾಗುವುದು. ಇದಕ್ಕಾಗಿ ಮೂರು ಹಂತದ ವ್ಯವಸ್ಥೆ ಇದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕರಾವಳಿ ಭಾಗದಲ್ಲಿ ಸಿಆರ್‍ಝಡ್ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅಕ್ರಮ ಮೀನುಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಲೈಫ್ ಜಾಕೆಟ್‍ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ತಿಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಮೀನುಗಾರರನ್ನು ಸನ್ಮಾನಿಸಲಾಯಿತು. ಮಹಿಳಾ ಸಬಲೀಕರಣ ಸಾಧಿಸಿದ ಸಾಫ್ ಗುಂಪಿನ ಸದಸ್ಯರು, ಕಲೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ಕರಾವಳಿ ಪ್ರದೇಶದ ಪಿಎಸ್‍ಸಿ ಪಟ್ಟಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಸಚಿವರು ಪುರಸ್ಕಾರ ನೀಡಿದರು. 13 ಕುಟುಂಬಗಳಿಗೆ ಮರಣೋತ್ತರ ಧನಸಹಾಯವಾಗಿ 15000 ರೂಪಾಯಿಗಳು ಮತ್ತು 26 ಹೆಣ್ಣುಮಕ್ಕಳಿಗೆ ಮದುವೆ ಧನಸಹಾಯವಾಗಿ 10000 ರು. ಮೊತ್ತದ ಪರಿಹಾರ ಒದಗಿಸಲಾಯಿತು.
ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಮಾವೇಲಿಕರ ಶಾಸಕ ಅರುಣಕುಮಾರ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಸೈಮಾ, ಮೀನುಗಾರಿಕೆ ಹೆಚ್ಚುವರಿ ನಿರ್ದೇಶಕ ಎನ್.ಎಸ್.ಶ್ರೀಲು, ಮತ್ಸ್ಯಫೆಡ್ ಅಧ್ಯಕ್ಷ ಟಿ.ಮನೋಹರನ್, ಮತ್ಸ್ಯ ಮಂಡಳಿ ಅಧ್ಯಕ್ಷ ಕೂಟಾಯಿ ಬಶೀರ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಡ್ವ.ಶೆಮೀರಾ ಫೈಸಲ್ ಮುಂತದವರು ಉಪಸ್ಥಿತರಿದ್ದರು.
ಕಾಸರಗೋಡು ನಗರಸಭೆ ಉಪಾಧ್ಯಕ್ಷೆ ಶಂಸೀದಾ ಫಿರೋಜ್ ಸ್ವಾಗತಿಸಿದರು. ಮೀನುಗಾರಿಕಾ ಜಂಟಿ ನಿರ್ದೇಶಕ ಪಿ.ಎ.ಸತೀಶ್ ಕುಮಾರ್ ವಂದಿಸಿದರು.